ಬೆಳಗಾವಿ-೦೧:ಬೆಳಗಾವಿ ನಗರದ ಕಿಲ್ಲಾ ಬಳಿಯಿರುವ ಸಾಮ್ರಾಟ್ ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆಯನ್ನು ನೀಡಿದರು.
ಬೆಳಗಾವಿಯ ಕಿಲ್ಲಾ ಬಳಿಯಿರುವ ಸಾಮ್ರಾಟ್ ಅಶೋಕ್ ವೃತ್ತದಿಂದ ಮಹಾಂತೇಶ್ ನಗರದ ಬ್ರಿಜ್ ವರೆಗೆ ಎರಡು ಬದಿಯ ರಸ್ತೆಯನ್ನು ನಿರ್ಮಿಸಲು ಚಾಲನೆಯನ್ನು ನೀಡಲಾಗಿತು. ವಿಶೇಷ ಅನುದಾನ 81.62 ಲಕ್ಷ ಅನುದಾನದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ವಿಶೇಷ ಅನುದಾನವನ್ನು ಮಂಜೂರು ಮಾಡಿದ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಆಸೀಫ್ ಸೇಠ್ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ನಗರಸೇವಕರು, ಅಧಿಕಾರಿಗಳು ಮುಂತಾದವರು ಹಾಜರಿದ್ದರು.