15/12/2025
IMG-20241130-WA0006

ಬೈಲಹೊಂಗಲ-೩೦: ಸಮೀಪದ ಹೊಸೂರ ಗ್ರಾಮದ ರೈತ ಮಡಿವಾಳಪ್ಪ ಹೊಂಗಲ ಅವರ 2ಏಕರೆ 31ಗುಂಟೆ ಹಾಗೂ ಅಡಿವೆಪ್ಪ ಕರಡಿಗುದ್ದಿ ಅವರ 2ಏಕರೆ32 ಗುಂಟೆ ಜಮೀನಿನಲ್ಲಿ ಬೆಳದಿದ್ದ ಕಬ್ಬು ಬೆಳೆಗೆ 3ಫೇ 2022ರಂದು
ವಿದ್ಯುತ್ ಅವಘಡದಿಂದ ಸುಮಾರು 400ಟನ್ ಕಬ್ಬು ಬೆಳೆ ಸುಟ್ಟು ಕರಕಲಾಗಿತ್ತು. ಈ ಬಗ್ಗೆ ಪರಿಹಾರ ಕೇಳಿ ಬೈಲಹೊಂಗಲ ನ್ಯಾಯಲಯದಲ್ಲಿ ರೈತರು ಹೆಸ್ಕಾಂ ವಿರುದ್ದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಆಲಿಸಿದ ನ್ಯಾಯಾಲಯ ಇಬ್ಬರು ರೈತರಿಗೆ 5 ಲಕ್ಷ 40ಸಾವಿರ ರೂಪಾಯಿಯಂತೆ ಒಟ್ಟು 10ಲಕ್ಷ 80 ಸಾವಿರ ರೂಪಾಯಿ ಪರಿಹಾರ ಧನ 30ದಿನದೊಳಗೆ ಶೇ6 ರಂತೆ ಬಡ್ಡಿ ಹಾಕಿ ಪರಿಹಾರ ವಿತರಿಸುವಂತೆ ಹೆಸ್ಕಾಂ ಇಲಾಖೆಗೆ ಬೈಲಹೊಂಗಲ ಹಿರಿಯ ಶ್ರೇಣಿ ನ್ಯಾಯಾಧೀಶರು ಶುಕ್ರವಾರ 29ನ. ದಂದು ಆದೇಶಮಾಡಿದ್ದಾರೆ. ರೈತರ ಪರವಾಗಿ ನ್ಯಾಯವಾದಿ ಎಮ್.ಎಸ್. ಅಂದಾನಶೆಟ್ಟಿ ಮತ್ತು ಎಫ್.ಎಸ್.ಸಿದ್ದನಗೌಡರ ವಾದ ಮಂಡನೆ ಮಾಡಿದ್ದರು.

error: Content is protected !!