ಗೋವಾ-೨೪:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ, ಗೋವಾ ಘಟಕ ದ ವತಿಯಿಂದ ಗೋವಾ ದ ವಾಸ್ಕೋದಲ್ಲಿ ರವೀಂದ್ರ ಭವನದಲ್ಲಿ-ಕನ್ನಡ ಸಾಂಸ್ಕೃತಿಕ ಕಾಯಕ್ರಮ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕನ್ನಡ ಕಾರ್ಯಕ್ರಮಗಳು ಇಂದು ಜರುಗಿದವು. ಶ್ರೀ ಸದಾನಂದ ಸೇಠ ತಾನಾವಾಡೆ, ಮಾನ್ಯ ರಾಜ್ಯ ಸಭಾ ಸದಸ್ಯರು, ಗೋವಾ, ಶ್ರೀ ಮಾವಿನೊ ಗುರಿನೋ, ಮಾನ್ಯ ಸಚಿವರು, ಸಾರಿಗೆ ಸಂಸ್ಥೆ ಮತ್ತು ಪಂಚಾಯತ ಇಲಾಖೆ, ಗೋವಾ, ಶ್ರೀ ಸಂಕಲ್ಪ ಅಮಣೋಕರ, ಶಾಸಕರು, ಮರ್ಮಗೋವಾ ಕ್ಷೇತ್ರ, ಶ್ರೀ ಕೃಷ್ಣಾ(ದಾಜಿ) ಸಾಳಕರ, ಶಾಸಕರು, ವಾಸ್ಕೋ ಕ್ಷೇತ್ರ,
ಶ್ರೀ ಸೋಮಣ್ಣ ಬೇವಿನಮರದ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಶ್ರೀ ಗಿರೀಶ ಬೋರಕರ, ನಗರಸಭೆ ಅಧ್ಯಕ್ಷರು, ಎಂ.ಎಂ.ಸಿ ವಾಸ್ಕೋ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಗೋವಾ,
ಶ್ರೀ ಮಂಜುನಾಥ ನಾಟೇಕರ್, ರಾಜ್ಯಾಧ್ಯಾಕ್ಷರು, ಕರವೇ ಗೋವಾ, ಶ್ರೀ ಪ್ರಕಾಶ್ ಮತ್ತೀಹಳ್ಳಿ, ಕಾರ್ಯದರ್ಶಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರೆ ಕನ್ನಡ ಪರ ಸಂಘ/ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.. ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ನೃತ್ಯ, ಕನ್ನಡ ಗೀತೆಗಳ ಕಾರ್ಯಕ್ರಮ ಜರುಗಿದವು.. ಇದೇ ಸಂದರ್ಭದಲ್ಲಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಸ್ಥಳ ಪರಿಶೀಲನೆ ಮಾಡಲಾಯಿತು.