ನೇಸರಗಿ-೨೨:ಸಮೀಪದ ಸುತಗಟ್ಟಿ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಾಂತವ್ವ ಸೋಮಪ್ಪ ದೇಯನ್ನವರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಪುಂಡಲೀಕ ಬಡಿಗೇರ ಇವರು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಇವರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಮೋಹರೆ, ಆಡಿವಪ್ಪ ಹೊಸಮನಿ, ಸದಸ್ಯರಾದ ಬಸವರಾಜ್ ತುಬಾಕಿ, ಸುವರ್ಣ ಜಮಾದಾರ,ರುದ್ರಪ್ಪ ರಾಮಕಿ, ಮಲ್ಲೇಶ ಕವಲದ, ನಿಂಗಪ್ಪ ಜನಗೊಂಡಣ್ಣವರ, ಭೀಮಶಿ ಕಲನಾಯ್ಕ, ಅನಸೂಯಾ ಬಾಳಿಗಟ್ಟಿ ಸೇರಿದಂತೆ ಗ್ರಾಮದ ಮುಖಂಡರು, ಸದಸ್ಯರು, ಪಿ ಡಿ ಓ ವನಜಾಕ್ಷಿ ಪಾಟೀಲ, ಗ್ರಾಮಸ್ಥರು ಹಾಜರಿದ್ದರು.