23/12/2024
IMG-20241121-WA0001

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ವಿರುದ್ದ ಗದಗ ಜಿಲ್ಲೆಯ ಡೋಣಿ ಸಮೀಪ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಹಾಗೂ ಪರಿಸರಾಸಕ್ತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೆಳಗಾವಿ ವಿಭಾಗದ ಆಯುಕ್ತರ ಮಾರ್ಫತ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕಿತ್ತೂರು ತಾಲೂಕಿನ ನಿಚ್ಚಣಿಕಿ ಗ್ರಾಮಸ್ಥರು, ರೈತ ಸಂಘದ ಮುಖಂಡರು,
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮೀತಿ, ಪರಿಸರಕ್ಕಾಗಿ ನಾವು, ರಾಜ್ಯ ಘಟಕ, ಪರಿಸರಕ್ಕಾಗಿ ನಾವು ಹಾವೇರಿ ಜಿಲ್ಲಾ ಘಟಕ, ಹುಬ್ಬಳ್ಳಿಯ ಕಾನೂನು ಮಹಾವಿದ್ಯಾಲಯ, ಹಾಗೂ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು,
ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದವರು ಸೇರಿದಂತೆ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟ ಜಿಲ್ಲೆಗಳಿಂದ ಪರಿಸರಾಸಕ್ತರು ಭಾಗವಹಿಸಿದ್ದರು,
ಮನವಿ ಸಲ್ಲಿಸಲು ಆಗಮಿಸಿದ್ದವರಲ್ಲಿ ಭಾಲಚಂದ್ರ ಜಾಬಶೆಟ್ಟಿ, ರುದ್ರಣ್ಣ ಗುಳಗುಳಿ, ಶಂಕರ ಕುಂಬಿ, ಶಿವಾಜಿ ಕಾಗ್ಣೇಕರ, ಬೈಲಪ್ಪ ದಳವಾಯಿ, ವರಗಪ್ಪನವರ, ರಾಜಶೇಖರ ದಳವಾಯಿ, ಎಮ್.ವಾಯ್. ಮೆಣಸಿನಕಾಯಿ, ಶಾರದಾ ಗೋಪಾಲ, ಡಾ. ಪೂರ್ಣಿಮಾ ಗೌರೋಜಿ, ಕೆ.ಎಸ್.ನಾಯಕ, ಆರ್.ಜಿ.ತಿಮ್ಮಾಪೂರ, ಸರಸ್ವತಿ ಪೂಜಾರ, ಅನಿತಾ ಪಾಟೀಲ, ಸುಭದ್ರಾ ಕುಲಕರ್ಣಿ, ಪರಿಮಳಾ ಜಕ್ಕಣ್ಣವರ, ಸ್ವಪ್ನಾ ಕರಬಶೆಟ್ಟರ, ಅಸ್ಲಮ್ ಅಬ್ಬಿಹಾಳ, ವೀರೇಶ ಅರಕೇರಿ, ದೀಪಕ ಕಟ್ಟಿಮನಿ, ಶ್ರೀಧರ ಹೂಗಾರ, ಮಾಂತಪ್ಪ ದ್ಯಾಪೂರ, ಸಂಗನಗೌಡ ಬಿರಾದಾರ, ಬಸವ ಢಗೆ, ಕುಮಾರ ಮ್ಯಾಗೇರಿ, ಬಸವರೆಡ್ಡಿ ದೇಸಾಯಿ ಹಾಗೂ ಇನ್ನಿತರರು ಭಾಗವಹಿಸಿದ್ದರು

error: Content is protected !!