12/12/2025
IMG-20241120-WA0045

ಬೆಳಗಾವಿ-೨೦: ರಾಜ್ಯ ಮಟ್ಟದ 71ನೇ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಸಮೀಪದ ಮಾರಿಹಾಳ ಗ್ರಾಮದ ವಿವಿಧೋದ್ದೇಶ ಸಹಕಾರಿ ಸಂಘವನ್ನು ರಾಜ್ಯದಲ್ಲಿ ಉತ್ತಮ ಸಹಕಾರಿ ಸಂಘವೆಂದು ಗುರತಿಸಿ ರಾಜ್ಯ ಸಹಕಾರಿ ಸಚಿವ ರಾಜಣ್ಣ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಅವರನ್ನು ಸತ್ಕರಿಸಿ ಸ್ಮರಣಿಕೆ ನೀಡಿದರು.

IMG 20241120 WA0044 - IMG 20241120 WA0044

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಾಹದೇವ ಧನಾಯಿ, ಸಂಘದ ಮುಖ್ಯಕಾರ್ಯದರ್ಶಿ ರುದ್ರಪ್ಪ ಚಂದನ್ನವರ, ಗುರುನಾಥ ಅಕ್ಕತಂಗೆರಹಳ್ಳ,ಶಂಕರಗೌಡ ನಿರ್ವಾಣಿ,ರಾಮ ಹುಣ್ಣುರ, ಸುಗಂಧಾ ಪುಜಾರ, ಸವಿತಾ ಧರ್ಮೋಜಿ, ಸಂಜಯ ಚಾಟೆ, ವಿನೋದ ಚೌಹಾನ, ಸಮೀರ ಮುಲ್ಲಾ, ಗಿರಿಜಾ ಪಾಟೀಲ, ಕಲಗೌಡ ಪಾಟೀಲ ಜಿಲ್ಲೆಯ ಶಾಸಕರು, ರಾಜ್ಯದ ಸಹಕಾರಿಗಳು ಇದ್ದರು.
ಉತ್ತಮ ಸಹಕಾರಿ ಸಂಘದ ಆಯ್ಕೆಗೆ ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರಾದ ಎಫ್.ಎಸ್.ಸಿದ್ದನಗೌಡರ ಮಾರಿಹಾಳ, ಕರಡಿಗುದ್ದಿ ಸುಳೆಭಾಂವಿ ಯದ್ದಲಭಾವಿಂಹಟ್ಟಿ ಗ್ರಾಮದ ರೈತರು ಹರ್ಷವ್ಯಕ್ತಪಡಿಸಿದ್ದಾರೆ.

error: Content is protected !!