ಬೆಳಗಾವಿ-೧೭:-ಪ್ರತಿವರ್ಷ ದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದಲ್ಲಿ ನೀಡಲಾಗುತ್ತಿರುವ ವಿದ್ಯಾರ್ಥಿಗಳ *ಪ್ರತಿಭಾ ಪುರಸ್ಕಾರ ಹಾಗೂ ಗಂಗಾ ವಿದ್ಯಾಸಿರಿ* ಯೋಜನೆಯ ಅನುಷ್ಠಾನದ ಮಹತ್ವಪೂರ್ಣ ಕಾರ್ಯಕ್ರಮವು ಬೆಂಗಳೂರಿನ ಕೆಇಬಿ ಇಂಜಿನಿಯರ್ಸ್ ಭವನ ಆನಂದರಾವ್ ಸರ್ಕಲ್ ಹತ್ತಿರ ಇದೆ ತಿಂಗಳು ರವಿವಾರ ದಿ 24ರಂದು ಬೆಳಗ್ಗೆ 10-30 ಗಂಟೆಗೆ ನಡೆಯಲಿದೆ, ಸನ್ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ(ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್) ಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕ ಪಡೆದು ವಿಭಾಗವಾರು ಆಯ್ಕೆಯಾಗಿ ಅರ್ಹತೆ ಹೊಂದುವ ವಿದ್ಯಾರ್ಥಿಗಳಿಗೆ ನಗದು ಹಣ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಮತ್ತು ಸದರಿ ಸಾಲಿನಲ್ಲಿ ವೈದ್ಯಕೀಯ, ಪಶು ವೈದ್ಯಕೀಯ, ಎಂಜಿನಿಯರಿಂಗ್, ಬಿ.ಎಸ್ಸಿ ಅಗ್ರೀ, ತೋಟಗಾರಿಕೆ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್ ಗಳಿಗೆ ಆಯ್ಕೆಯಾಗಿರುವ ಬಿ.ಪಿ.ಎಲ್.ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ನೌಕರರ ಮಹತ್ವಪೂರ್ಣ ಯೋಜನೆಯಾದ *ಗಂಗಾ ವಿದ್ಯಾಸಿರಿ* ಯಿಂದ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಸಂಘದ ಉಪಾಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ರವರು ತಿಳಿಸಿದ್ದಾರೆ,
ಈ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವನ್ನು ಹಾವೇರಿ ಜಿಲ್ಲೆಯ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ವಹಿಸುವರು,
ಸಂಘದ ರಾಜ್ಯಾಧ್ಯಕ್ಷರಾದ ಎಮ್ ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸುವರು,
ಉಡುಪಿಯ ಅಂಬಲಪಾಡಿ ಶಂಕರ ಪ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ, ಜಿ ಶಂಕರ ರವರು ಕಾರ್ಯಕ್ರಮ ಉದ್ಘಾಟನೆ ಮಾಡುವರು,. ಪ್ರತಿಭಾ ಪುರಸ್ಕಾರ ವನ್ನು ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಎನ್ ರವರು ವಿತರಿಸುವರು,
ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ ರು ಗಂಗಾ ವಿದ್ಯಾಸಿರಿ ವಿತರಣೆ ಮಾಡುವರು,
ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನ ಸಭಾ ಸದಸ್ಯರಾದ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್,ಡಾ, ಸಾಬಣ್ಣ ತಳವಾರ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಾಲಾ ನಾರಾಯಣರಾವ್, ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಸಂಘದ ಅಧ್ಯಕ್ಷರಾದ ಜಯಾ ಕೋಟ್ಯಾನ್, ಸಂಘದ ಮಾಜಿ ಅಧ್ಯಕ್ಷರಾದ ಕೆ ಆರ್ ಧರ್ಮಪ್ಪ, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ್, ಡಾ, ಜಯರಾಮ್, ಮಾಜಿ ಗೌರವಾಧ್ಯಕ್ಷರಾದ ಕೆ ಶಿವಲಿಂಗಪ್ಪ, ಬೆಂಗಳೂರು ಘಟಕದ ಅಧ್ಯಕ್ಷರಾದ ಎಮ್ ಪಿ ಮಂಜುನಾಥ್, ಮಾಜಿ ಅಧ್ಯಕ್ಷರಾದ ಡಾ ಮೌಲಾಲಿ, ಮಾಜಿ ಉಪಾಧ್ಯಕ್ಷರಾದ ನಾಗರಾಜ್ ಮಣ್ಣೂರ್, ಬೆಳಗಾವಿ ಜಿಲ್ಲಾ ಗಂಗಾಮತ ಸಮಾಜ ಸಂಘದ ಅಧ್ಯಕ್ಷರಾದ ದಿಲೀಪ್ ಕುಮಾರ್ ಕುರಂದೆವಾಡೆ ಯವರು, ಚಿತ್ರದುರ್ಗದ ಉದ್ಯಮಿ ಎಸ್ ಚಂದ್ರಶೇಖರ, ಸಿನೆಮಾ ನಟಿ ಭಾವನಾ, ಬೆಂಗಳೂರು ಉದ್ಯಮಿ ಅಣ್ಣಾರಾಯ ತಳವಾರ್, ಬಾಗಲಕೋಟ ಜಿಲ್ಲಾ ಗಂಗಾಮತ ಸಮಾಜದ ಅಧ್ಯಕ್ಷರಾದ ಮಹೇಶ ಕೋಳಿ, ಹಾಗೂ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಎ ಹಾಲೇಶಪ್ಪ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾ ಹಂತದ ಪದಾಧಿಕಾರಿಗಳು ಉಪಸ್ಥಿತರಿರು ವರು ಎಂದು ಬಸವರಾಜ ಫಕೀರಪ್ಪ ಸುಣಗಾರ ತಿಳಿಸಿದ್ದಾರೆ