23/12/2024
IMG-20241117-WA0008

ಬೆಳಗಾವಿ-೧೭: ಕರಡಿಗುದ್ದಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಸ್ಥಳೀಯರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯರ ಸಲಹೆ ಪಡೆದು, ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು ಎಂದು ಚನ್ನರಾಜ ತಿಳಿಸಿದರು.
ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳು ಗ್ರಾಮೀಣ ಕ್ಷೇತ್ರದಲ್ಲಿ ಆಗುತ್ತಿದೆ. ಇಡೀ ಕ್ಷೇತ್ರವನ್ನು ಮಾದರಿ ಮಾಡುವ ದಿಸೆಯಲ್ಲಿ ನಾವಿಟ್ಟಿರುವ ಹೆಜ್ಜೆಗೆ ಸಂಪೂರ್ಣ ಜನತೆ ಬಿನ್ನಿಗೆ ನಿಲ್ಲಬೇಕು. ಜನ ಸಹಕಾರವಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಈ ವೇಳೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿರೇಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ್ ಸುರೇಶ ಇಟಗಿ, ಅಡಿವೇಶ್ ಇಟಗಿ, ಶ್ರೀಕಾಂತ್ ಮಾಧುಭರಮಣ್ಣವರ್, ಗೌಸಮೊದ್ದಿನ್ ಜಾಲಿಕೊಪ್ಪ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

error: Content is protected !!