*ಚಿನ್ನದ ಪದಕ ಪಡೆದು ನಾಡಿಗೆ ಗೌರವ ತಂದ ಯುವತಿಗೆ: ಮಹಾಒಕ್ಕೂಟದ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಸತ್ಕಾರ*
*ಇತ್ತೀಚಿಗೆ ರಷಿಯಾದ ಉಜ್ಬೆಕಿಸ್ಥಾನದಲ್ಲಿ ನಡೆದ ವಿಶ್ವ ವೀರಾಗ್ರಣಿ ಬಾಲಕಿರ ಕರಾಟಿ ಸ್ಪರ್ಧೆಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಕ್ಕ-ತಂಗೆರಹಾಳ ಗ್ರಾಮದ ಮಾಜಿ ಸೈನಿಕರಾದ ಶಿವನಗೌಡ ನಿರ್ವಾಣಿಯವರ ಪುತ್ರಿ ಕುಮಾರಿ ವೈಷ್ಣವಿ ನಿರ್ವಾಣಿ ಅವರಿಗೆ ಶನಿವಾರ ಬೆಳಗಾವಿ ನಗರದ ಮಹಾಒಕ್ಕೂಟದ ಸೈನಿಕ ಸಂಪರ್ಕ ಕೇಂದ್ರದಲ್ಲಿ ಅದ್ದೂರಿ ಸ್ವಾಗತ ಹಾಗೂ ಸತ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಾಒಕ್ಕೂಟದ ಅಧ್ಯಕ್ಷರಾದ ಜಗದೀಶ ಪೂಜೇರಿ ಅವರು ಮಾತನಾಡಿ ನಾವು ಮಾಡುತ್ತಿರುವ ಸ್ವಾಗತ ಹಾಗೂ ಸತ್ಕಾರ ಸಮಾರಂಭ ಕುಮಾರಿ ವೈಷ್ಣವಿಯವರ ಮುಂದಿನ ಸ್ಪರ್ಧೆಗಳಿಗೆ ಪ್ರೋತ್ಸಾಹ ಹಾಗೂ ಸ್ಪೂರ್ತಿಯಾಗಲಿ, ಮುಂದೆ ಒಲಂಪಿಕ್ಸ್ ವರೆಗೂ ಈ ಸ್ಪೂರ್ತಿ ಹೀಗೆ ಇರಲಿ ಹಾಗೂ ಒಲಂಪಿಕ್ಸ್ ನಲ್ಲಿ ಪದಕ ಪಡೆದು ಮಾಜಿ ಸೈನಿಕರ ಸಮುದಾಯಕ್ಕೆ,ನಾಡಿಗೆ ಇನ್ನು ಹೆಚ್ಚಿನ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು. ಹಿರಿಯರಾದ ರಾಜೇಂದ್ರ ಹಾಲಗಿ ಇವರು ಮಾತನಾಡಿ ಎಲ್ಲಾ ಹಿರಿಯರ ಆಶೀರ್ವಾದ ಅವರ ಮೇಲಿದೆ ಮುಂದೊಂದು ದಿನ ನಾಡಿಗೆ ಒಳ್ಳೆಯ ಕೀರ್ತಿ ತರುವಂತಹ ಶಕ್ತಿ ನಿಮ್ಮದಾಗಲಿ ಎಂದು ಆಶೀರ್ವದಿಸಿದರು.*
*ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ಗೌರವಾಧ್ಯಕ್ಷರಾದ ರಮೇಶ ಚೌಗಲಾ ಮಾರ್ಗದರ್ಶಕರಾದ ರಾಜೇಂದ್ರ ಹಾಲಗಿ, ದಯಾನಂದ ಢಾಳಿ, ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ, ಸಂತೋಷ ಮಠಪತಿ, ಮಡಿವಾಳಪ್ಪ ಕಲಭಾವಿ,ಭಿಮಸೇನ ತೇನಗಿ ಅಶೋಕ ಮಜಗಿ, ಮಹೇಶ ಕಮ್ಮಾರ, ಸುನಿತಾ ಪಟ್ಟಣಶೆಟ್ಟಿ, ಸುಧಾ ಚೌಗಲಾ ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತಿರಿದ್ದರು.