23/12/2024
IMG-20241114-WA0000

ಬೆಳಗಾವಿ-೧೪: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 23, 24, 2024 ರಂದು, ಸ್ಥಳ:ಆರ್.ಡಿ.ಎಸ್.ಮಹಾವಿದ್ಯಾಲಯದ ಆವರಣ ಮೂಡಲಗಿಯಲ್ಲಿ ಬಹು ವಿಜೃಂಭಣೆಯಿಂದ ಜರುಗಲಿದೆ.
ಮುಂಜಾನೆ:8:00 ಘಂಟೆಗೆ, ಶ್ರೀ ಮಕ್ತುಂ ತಶೀಲ್ದಾರ ಹಿರಿಯ ನಿವೃತ್ತ ಯೋಧರು, ಯಾದವಾಡ ಅವರು ರಾಷ್ಟç ಧ್ವಜಾರೋಹಣವನ್ನು ನೆರವೇರಿಸುವರು. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಮೂಡಲಗಿ ತಾಲೂಕಾಧ್ಯಕ್ಷರಾದ ಡಾ.ಸಂಜಯ ಶಿಂಧಿಹಟ್ಟಿ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಸಮ್ಮೇಳನವು ಪೂಜ್ಯ ಶ್ರೀ ಮ.ನಿ.ಪ್ರ ಅಡವಿಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ಶ್ರೀ.ಅಮೃತಬೋಧ ಮಹಾಸ್ವಾಮಿಗಳು, ಪೂಜ್ಯ ಶ್ರೀ.ಶ್ರೀಧರಬೋಧ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಕ.ಸಾ.ಪ.ಬೆಂಗಳೂರು ರಾಜ್ಯಾಧ್ಯಕ್ಷರು, ಸನ್ಮಾನ್ಯ ಶ್ರೀ.ನಾಡೋಜ.ಡಾ.ಮಹೇಶ ಜೋಶಿ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಗೋಕಾಕದ ಚಿಂತಕರು, ಹಿರಿಯ ಸಾಹಿತಿಗಳು ಪ್ರೋ.ಚಂದ್ರಶೇಖರ ಅಕ್ಕಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅರಭಾವಿಯ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ. ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೆ.ಎಲ್.ಇ.ಸಂಸ್ಥೆ ಬೆಳಗಾವಿ ಕಾರ್ಯಾಧ್ಯಕ್ಷರು. ಸನ್ಮಾನ್ಯ ಶ್ರೀ. ಡಾ.ಪ್ರಭಾಕರ ಕೋರೆ ಅವರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ ಮಾನ್ಯ ಶ್ರೀ.ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರು ಬೆಳಗಾವಿ ಮಾನ್ಯ.ಶ್ರೀಮತಿ.ಲಕ್ಷಿö್ಮÃ ಹೆಬ್ಬಾಳಕರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಥಣಿ ಶ್ರೀ.ಬಾಳಾಸಾಹೇಬ ಲೋಕಾಪುರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಳಗಾವಿ ಲೋಕಸಭಾ ಸದಸ್ಯರು ಮಾನ್ಯ.ಶ್ರೀ.ಜಗದೀಶ ಶೆಟ್ಟರ ಅವರು ಪುಸ್ತಕ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಗೋಕಾಕ ಶಾಸಕರು ಮಾನ್ಯ.ಶ್ರೀ. ರಮೇಶ ಜಾರಕಿಹೊಳಿ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ವಿಜ್ಞಾನಕೃತಿ ಲೇಖಕರು ಡಾ.ಅಣ್ಣಪ್ಪ ಪಾಂಗಿ ಅವರು ರಚಿಸಿದ “ನೀವೂ ಶತಾಯುಷಿಗಳಾಗಿ” ಕೃತಿಯನ್ನು ರಾಜ್ಯಸಭಾ ಸದಸ್ಯರು ಮಾನ್ಯ.ಶ್ರೀ.ಈರಣ್ಣ ಕಡಾಡಿ ಅವರು ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಕನ್ನಡಪರ ಚಿಂತನೆ, ವೈದ್ಯಗೋಷ್ಠಿ, ಸಂಕೀರ್ಣಗೋಷ್ಠಿ, ಕವಿಗೋಷ್ಠಿ, ಕಾವ್ಯವಾಚನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಎಲ್ಲ ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಮೂಡಲಗಿ ತಾಲೂಕಾಧ್ಯಕ್ಷರಾದ ಡಾ.ಸಂಜಯ ಶಿಂಧಿಹಟ್ಟಿ ಅವರು ಆಹ್ವಾನಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ  ಮೆನಸಿನಕಾಯಿ,ಯ.ರು.ಪಾಟೀಲ ಸೇರಿದಂತೆ ಇತರರು ಉಪಸ್ಥಿತಿರಿದ್ದರು.

error: Content is protected !!