ಬೆಳಗಾವಿ-೦೭: ಯಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ೨೯ ಕಾಮಗಾರಿಯನ್ನು ಮಾಡದೆ ಸುಮಾರು ೫೪ ಲಕ್ಷ ೨೯ ಸಾವಿರ ರೂ. ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಗ್ರಾಪಂ ಅಧ್ಯಕ್ಷೆ ಅಕ್ರಮವಾಗಿ ಠರಾವ್ ಪಾಸ್ ಮಾಡಿ, ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ವಕೀಲ ಸುರೇಂದ್ರ ಉಗಾರೆ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೪ನೇ ಹಣಕಾಸು ಅನುದಾನದಲ್ಲಿ ೨೦೧೮- ೧೯ರಲ್ಲಿ ವಿವಿಧ ಕಾಮಗಾರಿ ಮಾಡಿದ್ದುಘಿ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಗುತ್ತಿಗೆದಾರ ಭರತ ಮಾಸೇಕರ್ ಜಿಪಂ ಸಿಇಒ ಅವರಿಗೆ ಖೊಟ್ಟಿ ದಾಖಲೆ ಸಷ್ಟಿಸಿ ಹಣ ಬಿಡುಗಡೆಗೆ ಮನವಿ ಮಾಡಿದ್ದರು. ಅಲ್ಲದೇ ಯಳ್ಳೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾಸೇಕರ ಎಂಬುವರು ತಮ್ಮ ಪತಿಯ ಹೆಸರಿನಲ್ಲಿ ಗುತ್ತಿಗೆದಾರ ಎಂದು ನಮೂದು ಮಾಡಿ ಗ್ರಾಪಂ ಸಭೆಯಲ್ಲಿ ಠರಾವ್ ಪಾಸ್ ಮಾಡಿ ಹಣ ಬಿಡುಗಡೆಗೆ ಸೂಚಿಸಿದ್ದರು. ಆದರೆ, ಅಕಾರಿಗಳು ಹಣ ಬಿಡುಗಡೆ ಮಾಡಿರುವ ಬಗ್ಗೆ ದಾಖಲೆಗಳನ್ನು ನೀಡುತ್ತಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತರಿಗೆ ಹಾಗೂ ಗ್ರಾಮೀಣಾಭಿರ್ವದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಪ್ರಮೋದ ಪಾಟೀಲ್, ಸದಸ್ಯರಾದ ಸತೀಶ್ ಪಾಟೀಲ್, ಮನಿಶಾ ಗಾಡಿ, ಇತರರು ಉಪಸ್ಥಿತಿರಿದ್ದರು.