ಬೆಳಗಾವಿ-೦೪:ಲಿಂಗಾಯತ ಸಂಘಟನೆ ಡಾ. ಫ.ಗು. ಹಳಕಟ್ಟಿ ಭವನ ಮಹಾಂತೇಶ ನಗರ, ಬೆಳಗಾವಿ ಇಲ್ಲಿ ದಿ. ೦೩-೧೧-೨೦೨೪ರಂದು ಕನಾ೯ಟಕ ರಾಜ್ಯೋತ್ಸವ ಮಾಸಾಚರಣೆ ನಿಮಿತ್ತ ʼಕನಾ೯ಟಕ ಏಕೀಕರಣ ಚಳವಳಿಯʼ ಕುರಿತು ವಾರದ ವಿಶೇಷ ಉಪನ್ಯಾಸ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾಯ೯ಕ್ರಮಕ್ಕೆ ಖಾನಾಪೂರ ಸರಕಾರಿ ಪ್ರಥಮ ದಜೆ೯ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ತಬೋಜಿಯವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದರು. ಇವರು ತಮ್ಮ ವಿಶೇಷ ಉಪನ್ಯಾಸದಲ್ಲಿ ೧೮೫೬ ರಿಂದ ಆರಂಭಗೊಂಡ ಕನಾ೯ಟಕ ಏಕೀಕರಣ ಚಳವಳಿಯ ವಿವಿಧ ಹಂತಗಳನ್ನು ಮತ್ತು ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳು, ಸಾಹಿತಿಗಳು, ವಿದ್ವಾಂಸರುಗಳಾದ ಶಾಂತವೀರಪ್ಪನವರು, ಡೆಪ್ಯೂಟಿ ಚನ್ನಬಸಪ್ಪ, ಬೆನಗಲ್ ರಾಮರಾಯರು, ಕನಾ೯ಟಕ ಕುಲಪುರೋಹಿತ ಆಲೂರು ವೆಂಕಟರಾಯ, ರಾ. ಹ. ದೇಶಪಾಂಡೆ, ಸರ್ ಸಿದ್ದಪ್ಪ ಕಂಬಳಿ, ಅಂದಾನಪ್ಪ ದೊಡ್ಡಮೇಟಿ, ಗಂಗಾಧರ ರಾವ್ ದೇಶಪಾಂಡೆ, ಹಡಿ೯ಕರ ಮಂಜಪ್ಪ ಮೊದಲಾದವರ ಕೊಡುಗೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಕನಾ೯ಟಕ ವಿದ್ಯಾವಧ೯ಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ-ಸಂಸ್ಥೆಗಳ ಪಾತ್ರವೂ ಕೂಡ ಅಷ್ಟೇ ಪ್ರಮುಖವಾಗಿತ್ತೆಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಈರಣ್ಣ ದೇವನ್ನವರ ವಹಿಸಿದ್ದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬೆಳಗಾವಿಯ ಕನಾ೯ಟಕ ರಾಜ್ಯೋತ್ಸವ ಕಾಯ೯ಕ್ರಮದಲ್ಲಿ ಸಂಘವು ತೋರಿದ ವಿವಿದ ಕಾಯ೯ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ನಮ್ಮ ಲಿಂಗಾಯತ ಸಂಘಟನೆಯು ಕಾಲಕಾಲಕ್ಕೆ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಭಾಷೆ ಮುಂತಾದ ಸಮಾಜಮುಖಿ ಕಾಯ೯ಕ್ರಮಗಳನ್ನು ಹಮ್ಮಿಕೊಂಡು ನಾಡಿನ ಸಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ ಎಂದು ಹೇಳಿದರು.
ಕಾಯ೯ಕ್ರಮದ ಆರಂಭದಲ್ಲಿ ಮಹಾದೇವಿ ಅರಳಿಯವರು ಪ್ರಾಥ೯ನೆ ಹೇಳಿದರು. ಶರಣೆ ನಾಡಗೌಡರ, ಜಯಶ್ರೀ ಚವಲಗಿ, ಸುವಣಾ೯ ಗುಡಸ, ಅಕ್ಕಮಹಾದೇವಿ ಅರಳಿ, ಸುರೇಶ ನರಗುಂದ, ವ್ಹಿ. ಕೆ. ಪಾಟೀಲ, ಮಹಾಂತೇಶ ಇಂಚಲ ಮುಂತಾದವರು ವಚನ ವಿಶ್ಲೇಷಣೆ ಮಾಡಿದರು. ಎಮ್. ವಾಯ್. ಮೆಣಸಿನಕಾಯಿ ಅವರು ಅತಿಥಿಗಳನ್ನು ಪರಿಚಯಿಸಿದರು. ಬಸವರಾಜ ಬಿಜ್ಜರಗಿ ಪ್ರಸಾದ ಸೇವೆಗೈದರು. ಸ೦ಗಮೆಶ ಅರಳಿ ನಿರೂಪಿಸಿದರು ಸದರಿ ಕಾಯ೯ಕ್ರಮದಲ್ಲಿ ಬಸವರಾಜ ಕರಡಿಮಠ,ಗಂಗಪ್ಪ ಉಣಕಲ್, ಗಜಾನನ, ವಾಲಿ, ಇಟಗಿ, ಶ್ರೀದೇವಿ ನರಗುಂದ, ಸ್ಪೂತಿ೯ ದೇಯನ್ನವರ, ಕಮಲಾ ಗಣಾಚಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಕಾಯ೯ಕ್ರಮಕ್ಕೆ ಶೋಭೆಯನ್ನು ತಂದರು.