ಬೆಳಗಾವಿ-೦೨:ಕುಂದಾನಗರಿ ಬೆಳಗಾವಿ ನಗರದಲ್ಲಿ ದೀಪಾವಳಿ ನಿಮಿತ್ತ ಶುಕ್ರವಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಲಕ್ಷ್ಮೀ ಕುಬೇರ ಪೂಜೆಯನ್ನು ಸಂಭ್ರಮ, ಸಡಗರದಿಂದ ಮುಕ್ತಾಯಗೊಳಿಸಲಾಯಿತು.
ಲಕ್ಷ್ಮೀ ಪೂಜೆ ನಿಮಿತ್ತ ನಗರ ಹಾಗೂ ಗ್ರಾಮೀಣ ಭಾಗದ ಅಂಗಡಿಕಾರರು ತಮ್ಮ ಅಂಗಡಿಗಳನ್ನು ಆಕರ್ಷಕವಾಗಿ ಅಲಂಕರಿಸಿದ್ದರು. ಅಂಗಡಿ ಮುಂಗಟ್ಟುಗಳನ್ನು ಹೂವಿನ ಹಾರಗಳ ಜೊತೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.
ಲಕ್ಷ್ಮೀ ಪೂಜೆಯ ನಂತರ ಪಟಾಕಿ ಸಿಡಿಸಲಾಯಿತು. ಇದರೊಂದಿಗೆ ಪ್ರಸಾದ ವಿತರಿಸಲಾಯಿತು. ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಸಾರ್ವಜನಿಕರು ಖರೀದಿಗಾಗಿ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದು ಕಂಡುಬಂತು.