ಆಯುರ್ವೇದ ದಿನಾಚರಣೆ ಪ್ರಯುಕ್ತ ಕಣಚೂರು ಆಯುರ್ವೇದ ಅಸ್ಪತ್ರೆಯ ವತಿಯಿಂದ ಜಿಲ್ಲಾ ಕಾರಾಗ್ರಹದಲ್ಲಿ ವೈದ್ಯಕೀಯ ಶಿಬಿರ
ಮಂಗಳೂರು-೨೯:
ಕಣಚೂರು ಆಯುರ್ವೇದ ಆಸ್ಪತ್ರೆ ,ವೇದಂ ಆಯುರ್ವೇದ , ಕರ್ನಾಟಕ ಆಯುರ್ವೇದ ಕಾಲೇಜು ಮತ್ತು ಎಲೋಶಿಯಸ್ ಕಾಲೇಜು ಎನ್ ಎಸ್ ಎಸ್ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗ್ರಹದ ಖೈದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಅಕ್ಟೋಬರ 28 ರಂದು ನಡೆಸಲಾಯಿತು.
ಕಾರಾಗ್ರಹ ಅಧೀಕ್ಷಕ ಶ್ರೀ ಓಬಳೇಶಪ್ಪರವರು ಉದ್ಘಾಟಿಸಿ ಖೈದಿಗಳ ಆರೋಗ್ಯದೆಡೆಗೆ ಕೊಡುವ ಗಮನವು ಅವರ ಮನಸ್ಸಿಗೂ ಶಾಂತಿ ನೀಡ ಬಲ್ಲುದು ಎಂದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಮಾತನಾಡಿ ಖೈದಿಗಳಿಗೂ ಸಹಕಾರ ನೀಡುವ ಮೂಲಕ ಅವರ ಬೇಸರ ದೂರಾಗಿ ಮನಪರಿವರ್ತನೆ ಗೂ ಸಹಕಾರಿಯಾಗ ಬಲ್ಲುದು .ಆಗಾಗ ಈ ರೀತಿಯ ಶಿಬಿರ ಮಾಡುವ ಉದ್ದೇಶ ಸಂಸ್ಥೆಗಿದೆ ಎಂದರು
ಕಣಚೂರಿನ ಆಯುರ್ವೇದ ಕಾರ್ಡನ್ನು ಸಹ ಇದೇ ವೇಳೆ ಕಾರಾಗ್ರಹ ಮುಖ್ಯಾಧಿಕಾರಿಗಳಿಗೆ ವೇದಂ ಆಯುರ್ವೇದ ಆಸಪ್ತ್ರೆಯ ಮುಖ್ಯಸ್ಥ ,ಕಣಚೂರಿನ ಕಾಯಚಿಕಿತ್ಸಾ ವೈದ್ಯ ಡಾ ಕೇಶವ ರಾಜ್ ಹಸ್ತಾಂತರಿಸಿದರು.
ಎಲೋಶಿಯಸ್ ಕಾಲೇಜಿನ ಮ್ಯಾಕ್ಸಿಮ್, ಹಾಗೂ ಬೆಡ್ಮಡ್ ಫ್ರಂಕ್ ರವರು ಈ ಸತ್ಕಾರ್ಯದ ವಿವರ ನೀಡಿದರು.
ಹಾಗೆಯೇ ಕರ್ನಾಟಕ ಆಯುರ್ವೇದ ಕಾಲೇಜಿನ ಡಾ ವಾಣಿಶ್ರೀಯವರು ತಮ್ಮ ಸಂಸ್ಥೆಯೂ ಸಹ ಈ ಶಿಬಿರದೊಡನೆ ಜೊತೆಗೂಡಿದ್ದು ಅತೀವ ಸಂತಸ ತಂದಿದೆ ಎಂದರು
ರಕ್ತ ತಪಾಸಣೆ, ಮೂಳೆ ಸಾಂದ್ರತೆ ಪರೀಕ್ಷೆಗಳನ್ನೊಳಗೊಂಡಂತೆ
ಸುಮಾರು ಮುನ್ನೂರ ಐವತ್ತು ಖೈದಿಗಳಿರುವ ಈ ಕಾರಾಗ್ರಹದಲ್ಲಿ ನಡೆಸಲಾದ ಈ ತಪಾಸಣಾ ಶಿಬಿರದಲ್ಲಿ ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ, ಡಾ ಚರಣ್ , ಡಾ ಜೈನುದ್ದೀನ್ ಸಹಾಯಕರಾಗಿ ಜಿಸ್ನಾ ಹಾಗೂ ಶ್ರಾವ್ಯಾ ಅವರೂ ಭಾಗವಹಿಸಿದ್ದರು.
ಡಾ ಸುರೇಶ ನೆಗಳಗುಳಿ
ಕಣಚೂರು ಆಯುರ್ವೇದ ಆಸ್ಪತ್ರೆ
ನಾಟೆಕಲ್ಲು ಮಂಗಳೂರು