filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 128; cct_value: 0; AI_Scene: (-1, -1); aec_lux: 91.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 49;
ಬೆಳಗಾವಿ-೨೩:: ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಐಪಿಎಲ್ ಮಾದರಿಯಲ್ಲಿ ರಾಜ್ಯ ಮಟ್ಟದ
ಸಾಪ್ಟ್ ಬಾಲ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಗಂಗಾಧರ ರಾಜು ಅವರು ಮಾಹಿತಿ ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದ ಪ್ರತಿ ಜಿಲ್ಲೆಗೆ ಒಂದು ತಂಡವನ್ನು ಮಾಡಲಾಗಿದ್ದು, ಬೆಳಗಾವಿ ಜಿಲ್ಲೆಗೆ ಒಂದು ತಂಡವನ್ನು ಸಿದ್ಧಪಡಿಸಲಾಗಿದೆ. ಈ ಬೆಳಗಾವಿ ತಂಡದ ಪ್ರಾಯೋಜಕರಾದ ಡಾ. ಅಂಜಲಿತಾಯಿ ಫೌಂಡೇಶನ್ ನಿರ್ವಹಿಸಲಿದ್ದು. ಜೊತೆಗೆ ಈ ಸ್ಪರ್ಧೆಯು ನವೆಂಬರ್ 1 ರಿಂದ ಡಿಸೆಂಬರ್ 1 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಾವಳಿಗಳ ನೇರ ಪ್ರಸಾರ ಡಿಡಿ ಚಂದನದಲ್ಲಿ ಆಗಲಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದ ಯುವ ತರುಣರು ಅಂತಾರಾಷ್ಟ್ರೀಯ ತಂಡದಲ್ಲಿ ಆಗಲಿ ಮತ್ತು ಐಪಿಎಲ್‌ನಲ್ಲಿ ಆಗಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ಸಿಗುವುದು ಸ್ವಲ್ಪ ಕಡಿಮೆ ಆದ್ದರಿಂದ ಬೀದಿ ಕ್ರಿಕೆಟ್‌ನಲ್ಲಿ ಮುಂಬರುವ ಹಲವು ಆಟಗಾರರಿದ್ದು ಅವರನ್ನು ಮುಖ್ಯವಾಹಿನಿಗೆ ತರಲು ಈ ಪಂದ್ಯಾವಳಿ ಆಯೋಜಿಸಲಾಗಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ಹೆಚ್ಚು ಹೆಚ್ಚು ಸಿಗುತ್ತೆ ಎಂದು ತಿಳಿಸಿದರು.
ಬಳಿಕ ಬೆಳಗಾವಿ ತಂಡದ ಲೋಗೋ ಅನಾವರಣ ಮಾಡಲಾಗಿದ್ದು, ಬೆಳಗಾವಿ ತಂಡದ ಹೆಸರು ರಾಜಾ ಶಿವಾಜಿ ಬೆಳಗಾವಿ ಎಂದು ಇಡಲಾಗಿದೆ.
