23/12/2024
IMG-20240713-WA0004

ಬೆಳಗಾವಿ-೧೯:ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರುಗೆ ಸೇವೆ ನೀಡುತ್ತಿದ್ದ ಇಂಡಿಗೋ ವಿಮಾನ ಅ.27 ರಿಂದ ರದ್ದಾಗುತ್ತಿವೆ. ಆದರೆ ಸಂಸದ ಜಗದೀಶ್ ಶೆಟ್ಟರ್ ಸ್ಥಳೀಯ ಜನರ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದರು.

ಶನಿವಾರ ಬೆಳಗಾವಿ ಪತ್ರಕರ್ತ ರೊಂದಿಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು, ಇದೇ ರೀತಿ ಪುಣೆ, ಬೆಳಗಾವಿ ವಿಮಾನ ರದ್ದಾಗಿವೆ. ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಿಸುವ ನಿಟ್ಟಿನಲ್ಲಿ ಈ ಷಡ್ಯಂತ್ರ ನಡೆಯುತ್ತಿದೆ. ಬೆಳಗಾವಿ ಪ್ರವಾಸಿಗರು ಹುಬ್ಬಳ್ಳಿಗೆ ಹೋಗಬೇಕೆನ್ನುವ ತೊಂದರೆ ಮಾಡುತ್ತಿದ್ದಾರೆ. ಇದು ಹುಬ್ಬಳ್ಳಿ ರಾಜಕಾರಣಿಗಳ ತಮ್ಮ ನಡೆ ಸರಿಯಾಗಿದೆ. ಆದರೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿ ಜನರ ಹಿತಕಾಯಬೇಕಿದೆ. ಈ‌ ನಿಟ್ಟಿನಲ್ಲಿ ಬೆಳಗಾವಿ ಜನರ ವಿಶ್ವಾಸ ತೆಗೆದುಕೊಂಡು ಸ್ಥಗಿತಗೊಳ್ಳುತ್ತಿರುವ ವಿಮಾನ ಸೇವೆಗಳನ್ನು ಪುನರ್ ಪ್ರಾರಂಭಿಸುವ ಕೆಲಸ ಮಾಡಬೇಕು ಎಂದರು.
ಬೆಂಗಳೂರಿನಿಂದ ಬೆಳಗಾವಿಗೆ ಒಂದೇ ಭಾರತ್ ರೈಲಿಗೆ ತಾಂತ್ರಿಕ ಸಮಸ್ಯೆ ಇದೆ ಎಂದು ಅನುಮತಿ ಕೊಡಲಿಲ್ಲ. ಆದರೆ ಪುಣೆಯಿಂದ ಹುಬ್ಬಳ್ಳಿ ಒಂದೇ ಭಾರತ್ ರೈಲು ಪ್ರಾರಂಭ ಮಾಡಿದ್ದಾರೆ. ಈಗ ಯಾಕೆ ತಾಂತ್ರಿಕ ಸಮಸ್ಯೆ ಬರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಬೆಳಗಾವಿಗೆ ಒಂದೇ ಭಾರತ್ ರೈಲು ಬೇಕಾದಾಗ ತಾಂತ್ರಿಕ ಸಮಸ್ಯೆ ಎನ್ನುವ ರೈಲ್ವೆ ಇಲಾಖೆ ಪುಣೆ – ಹುಬ್ಬಳ್ಳಿಯಿಂದ ಒಂದೇ ಭಾರತ್ ರೈಲು ಆರಂಭಿಸಿದ್ದು, ಬೆಳಗಾವಿ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿ ಹೆಚ್ಚಿಗೆ ಬರುವುದು ಬೆಳಗಾವಿಯಲ್ಲಿ. ರಾಷ್ಟ್ರೀಯ ಹೆದ್ದಾರಿ ಬೆಳಗಾವಿಯಲ್ಲಿದೆ. ಕಿತ್ತೂರಿನ ಗಡಿಯಿಂದ ನಿಪ್ಪಾಣಿವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಜಾಂಬೋಟಿ, ಬೆಳಗಾವಿ, ಕೊಲ್ಲಾಪುರ, ರಾಮನಗರ, ಅನಮೋಡ ವರೆಗೆ ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಯಾವುದೇ ಸಮಸ್ಯೆ ಇದ್ದರೇ, ಅದು ಧಾರವಾಡದಲ್ಲಿದೆ. ಅದನ್ನು ಬೆಳಗಾವಿಗೆ ಸ್ಥಳಾಂತರ ಮಾಡಬೇಕು ಹಾಗೂ ಬೆಳಗಾವಿ ನಗರದ ರಿಂಗ್ ರಸ್ತೆಯ ಬಗ್ಗೆಯೂ ದ್ವನಿ ಎತ್ತಬೇಕಿದೆ ಎಂದು ಒತ್ತಾತಿಸಿದ್ದಾರೆ.
ಜಗದೀಶ್ ಶೆಟ್ಟರ್ ನನ್ನ ಕರ್ಮಭೂಮಿ ಬೆಳಗಾವಿ ಎಂದು ಹೇಳಿದ್ದರು. ಆದರೆ ಅವರು ಇಲ್ಲಿಯವರೆಗೂ ಸ್ವಂತ ಮನೆ ಮಾಡಿಲ್ಲ. ಕರ್ಮ ಭೂಮಿ‌ ಬಿಟ್ಟು ಜನ್ಮ ಭೂಮಿ ಬಗ್ಗೆ ಕಾಳಜಿ ವಜಿಸಿದ ಹಾಗೆ ಕಾಣುತ್ತಿದೆ. ದಯಮಾಡಿ ಇಲ್ಲಿ ಮನೆ ಮಾಡಿ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

error: Content is protected !!