ಬೈಲಹೊಂಗಲ-೧೮: ಸಮೀಪದ ಸುಕ್ಷೇತ್ರ ಇಂಚಲ ಮಠದ ಜಾತ್ರಾ ಮಹೊತ್ಸವದಲ್ಲಿ ನಡೆಯುವ ಆಯುರ್ವೇದ ಕಾಲೇಜು ಬೆಳ್ಳಿ ಮಹೊತ್ಸವಕ್ಕೆ ಕೇಂದ್ರ ಆಯುಷ್ ಇಲಾಖೆಯ ರಾಜ್ಯ ಸಚಿವರಾದ ಪ್ರತಾಪ್ ರಾವ್ ಜಾಧವ್ ಅವರನ್ನು ಅತಿಥಿಯಾಗಿ ಆಗಮಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ದೆಹಲಿಯಲ್ಲಿ ಸಚಿವರ ಕಛೇರಿಯಲ್ಲಿ
ಭೇಟಿಯಾಗಿ ಆಮಂತ್ರಿಸಿದರು.
ಸಚಿವರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರ್ಯಕ್ರಮದ ನಡೆಯುವ ಬಗ್ಗೆ ವಿವರಿಸಿ,
ಡಿಸೆಂಬರ್ 29 ರಿಂದ ಸುಕ್ಷೇತ್ರ ಇಂಚಲ ಮಠದಲ್ಲಿ ಜರಗಲಿರುವ ಜಗದ್ಗುರು ಪೂಜ್ಯ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 85ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ, ಅಖಿಲ ಭಾರತ ವೇದಾಂತ ಪರಿಷತ್ತಿನ 55ನೇ ವರ್ಷದ ಕಾರ್ಯಕ್ರಮ ಹಾಗೂ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 50ನೇ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ವಿನಂತಿಸಿದರು.
ಇವರ ಮನವಿಗೆ ಸ್ಪಂದಿಸಿದ ಅಯುಷ್ಯಾ ಸಚಿವರು ಗ್ರಾಮೀಣ ಮಟ್ಟದಲ್ಲಿ ಹೆಮ್ಮರವಾಗಿ ಬೇಳದಿರುವ ಇಂಚಲಕ್ಕೆ ಬರುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕಾರದ ಮಹಾಂತೇಶ ದೊಡ್ಡಗೌಡರ, ಡಾ. ವಿ.ಆಯ್. ಪಾಟೀಲ ಹಾಜರಿದ್ದರು.