23/12/2024
IMG-20241014-WA0056

ಕಾರವಾರ-೧೪:ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಭಟ್ಕಳ ಅರಬ್ಬಿ ಸಮುದ್ರದಲ್ಲಿ ಯುದ್ದ ವಿಮಾನದಿಂದ ಫೈರಿಂಗ್ – ಮೂರು ದಿನ ಮೀನುಗಾರರಿಗೆ ನಿರ್ಬಂಧ.

ಕಾರವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಅಕ್ಟೋಬರ್ 14 ರಿಂದ 16 ರವರೆಗೆ ಬೆಳಿಗ್ಗೆ 07- 00 ಗಂಟೆಯಿಂದ 18-00 ಗಂಟೆಯವರೆಗೆ ನೇತ್ರಾಣಿ ನಡುಗಡ್ಡೆಯಲ್ಲಿ ಫೈಟರ್ ಜಟ್ ಗಳು ಪೈರಿಂಗ್ ನಡೆಸುತ್ತಿರುವ ಹಿನ್ನಲೆಯಲ್ಲಿ ನೌಕಾದಳವು ಮೀನುಗಾರಿಕಾ ಇಲಾಖೆ ಮೂಲಕ ಮೀನುಗಾರರರಿಗೆ ಎಚ್ಚರಿಕೆ ನೀಡಿದೆ.ಮೂರು ದಿನ ಭಾರತೀಯ ನೌಕಾ (Indian navy) ಪಡೆ ಯುದ್ದ ವಿಮಾನದಿಂದ ಪೈರಿಂಗ್ ಹಮ್ಮಿಕೊಂಡಿದ್ದು, ಆ ಸಮಯದಲ್ಲಿ ನೇತ್ರಾಣಿ ನಡುಗಡ್ಡೆಯ 10 ನಾಟಿಕಲ್ ಮೈಲು ವ್ಯಾಪ್ತಿಯ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಭಟ್ಕಳ ತಾಲೂಕಿನ ಪಾತಿ

ದೋಣಿಯವರಿಗೆ, ಗಿಲ್ ನೆಟ್ ದೋಣಿಯವರಿಗೆ
ಫಿಶಿಂಗ್ ಬೋಟ್, ಪರ್ಶಿಯನ್ ಬೋಟ್
ಸೇರಿದಂತೆ ಆಳ ಸಮುದ್ರ ಮೀನುಗಾರಿಕಾ
ಬೋಟ್ ಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೇ ನೇತ್ರಾಣಿ ದ್ವೀಪದ ಬಳಿ ಪ್ರವಾಸಿಗರು ಹಾಗೂ ಸ್ಕೂಬಾ ಡೈವಿಂಗ್ ಮಾಡುವವರಿಗೂ ನಿರ್ಬಂಧಿಸಲಾಗಿದೆ.

error: Content is protected !!