23/12/2024
IMG-20241012-WA0004

ದಸರಾ ನೋಡುತ್ತಿರುವುದೇ ಖುಷಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮೈಸೂರು-೧೨ : ವಿಶ್ವ ಪ್ರಸಿದ್ಧ ಮೈಸೂರು ದಸರಾ ನೋಡಲು ಖುಷಿಯಾಗುತ್ತಿದೆ. ಜೀವನದಲ್ಲಿ ಮೊದಲ ಬಾರಿಗೆ ದಸರಾ ನೋಡುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೈಸೂರಿನ ಶಾರದಾ ದೇವಿನಗರದ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಸಚಿವರು ಭೇಟಿಯಾದರು. ಈ ವೇಳೆ ಮಾತನಾಡಿದ ಸಚಿವರು ಜೀವನದಲ್ಲಿ ಒಮ್ಮೆಯಾದರೂ ದಸರಾ ನೋಡಬೇಕು. ಇಂದು ದಸರಾ ನೋಡುವ ಕನಸು ಈಡೇರುತ್ತಿದೆ ಎಂದರು.

ದಸರಾ ನೋಡಲು ಖುಷಿಯಾಗುತ್ತಿದೆ‌. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜೊತೆಯಲ್ಲಿ ದಸರಾ ನೋಡುತ್ತಿರುವೆ. ದಸರಾ ವೈಭವವನ್ನು ನೋಡುವುದೇ ಚಂದ ಎಂದು ಸಚಿವರು ತಿಳಿಸಿದರು.

* *ಸಿಎಂ ಭೇಟಿಯಾದ ಸಚಿವರು*
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವರು ಕೆಲಕಾಲ ಚರ್ಚೆ ನಡೆಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಸಚಿವ ಕೆ.ವೆಂಕಟೇಶ್, ಶಾಸಕರಾದ ಕೃಷ್ಣಮೂರ್ತಿ, ಡಿ.ರವಿ ಶಂಕರ್, ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು.

* *ರೈಲು ದುರಂತಕ್ಕೆ ಬೇಸರ*
ತಮಿಳುನಾಡಿನ ಪೆರಂಬೂರು ಸಮೀಪ ಮೈಸೂರು ದರ್ಬಾಂಗ್‌ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್‌ ರೈಲು ನಡುವೆ ಅಪಘಾತಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಅಪಘಾತದಲ್ಲಿ ಗಾಯಗೊಂಡ ಕನ್ನಡಿಗರ ಕುಟುಂಬದೊಂದಿಗೆ ಸರ್ಕಾರ ಇರಲಿದೆ ಎಂದು ಹೇಳಿದರು.

error: Content is protected !!