23/12/2024
1728392931261
ಅಂಕಲಗಿ-೦೯: ಗೋಕಾಕ ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಅಕ್ಟೋಬರ್ 10 ರಂದು (ಗುರುವಾರ) ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜಯದಶಮಿ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

ಡೋಳ್ಳಿನ ವಾಲಗ, ಡೋಳ್ಳಿನ ಪದಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಜರುಗಲಿವೆ. ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಹಣಬರಟ್ಟಿ ಶ್ರೀ ಮಹಾಲಕ್ಷ್ಮೀ ದೇವತೆಗಳು ಅ.11 ರಂದು (ಶುಕ್ರವಾರ) ಸಂಜೆ 5 ಗಂಟೆಗೆ ಪಲ್ಲಕಿಯೊಂದಿಗೆ ಅಗ್ನಿ ಹಾಯಲಿವೆ.

ಇದರಲ್ಲಿ ಭಾಗವಹಿಸುವ ಸಮಸ್ತ ಭಕ್ತಾಧಿಗಳು ದೇವಿ ಕೃಪೆಗೆ ಪಾತ್ರರಾಗಿ, ಅನ್ನ ಪ್ರಸಾದ ಪಡೆಯಬೇಕು ಎಂದು ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷ ಲಕ್ಕಪ್ಪ ಪೂಜಾರಿ ಅವರು ಕೋರಿದ್ದಾರೆ.

error: Content is protected !!