ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಇರುವ ಪಿರಣವಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಜೈತನಮಾಳ ಎಂಬ ಗ್ರಾಮವನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಬಂಧ ಪಟ್ಟ ಶಾಸಕರು ಮರೆತು ಬಿಟ್ಟಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಕಾರಣ ಜೈತನಮಾಳ ಎಂಬ ಗ್ರಾಮವು ಅಬಿವೃದ್ಧಿ ಇಲ್ಲದೆ ಹಿಂದೆ ಉಳಿದಿದೆ ಜೈತನಮಾಳಕ್ಕೆ ಸರಿಯಾದ ರಸ್ತೆ ಸಂಪರ್ಕ ಬೀದಿ ದೀಪ ಮಕ್ಕಳಿಗೆ ಅಂಗನವಾಡಿ ಶಾಲೆ ಇಲ್ಲದೆ ಇಲ್ಲಿಯ ನಿವಾಸಿಗಳು ಮರಣ ಹೊಂದಿದಾಗ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಕೂಡ ಇಲ್ಲದೆ ಸಕಲ ಸೌಕರ್ಯಗಳಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ಯಾವುದೆ ಅಬಿವೃದ್ಧಿ ಇರುವುದಿಲ್ಲ . ಈ ಗ್ರಾಮದಲ್ಲಿ ಶೇಕಡಾ 90% ಜನರು ಬಡವರು ಹಿಂದುಳಿದವರು ಪ.ಜಾತಿ/ ಪ.ಪಂ ಸಮುದಾಯದವರು ಇಲ್ಲಿಯ ಜನರಿಗೆ ಉತ್ತಮ ಗುಣಮಟ್ಟದ ಮನೆಗಳು ಇಲ್ಲ ಸರ್ಕಾರ ಕೊಡುವ ಸೌಲಭ್ಯಗಳು ದೊರೆಯುತ್ತಿಲ್ಲ. ಸಂತ್ರಸ್ತರು ಮನೆ ನವೀಕರಣಕ್ಕೆ ಅರ್ಜಿಗಳನ್ನು ಹಾಕಿದರು ಪರಿಗಣಿಸದೆ ಬೇಜವಾಬ್ದಾರಿ ವಹಿಸುತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು. ಹೀಗಾದರೆ ಸಂವಿಧಾನದಲ್ಲಿ ಇರುವ ಅತ್ಯಮೂಲ್ಯವಾದ ಹಕ್ಕುಗಳನ್ನು ನಮ್ಮವರಿಂದ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ಎಂಬ ವಾತಾವರಣ ಸೃಷ್ಟಿಯಾಗಿದೆ ನಮ್ಮವರಿಗೆ ಸಿಗಬೇಕಾದ ಸೌಲಭ್ಯಗಳು ಯೋಜನೆಗಳು ಹಕ್ಕುಗಳು ಯಾವುದು ಸರಿಯಾಗಿ ಸಿಗುತ್ತಿಲ್ಲ ಇದರಿಂದ ಹಿಂದುಳಿದ ಸಮುದಾಯದ ಜನರಾದ ನಮ್ಮವರು ಅತಿ ಹಿಂದೆಯೇ ಉಳಿಯುವಂತಾಗಿದೆ . ಇದಕ್ಕೆ ಕಾರಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಶಾಸಕರು. ಈ ಪರಸ್ಥಿತಿಯನ್ನು ವೀಕ್ಷಿಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಬರಬೇಕು ಸರಿಯಾದ ಸೂಕ್ತ ಕ್ರಮ ಕೈಗೊಂಡು ನಮ್ಮವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಸಂಬಂಧ ಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶಾಸಕರು ಸಚಿವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರಮಹೇಶ ಎಸ್ ಶಿಗಿಹಳ್ಳಿ (ರಾಜ್ಯಾಧ್ಯಕ್ಷರು) ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಎಚ್ಚರಿಕೆ ನೀಡಿದ್ದಾರೆ.