ಅಂಕಲಗಿ-೩೦:ಅಕ್ಕತಂಗೇರಹಾಳ ಗ್ರಾಮದ ಸರ್ವತೋಮುಖ ಅಭಿವ್ರದ್ಧಿ ನನ್ನ ಬಲವಾದ ಇಚ್ಛೆ. ರಾಜಕಾರಣ ವಿಷಯವೇ ಬೇರೆ. ಅಭಿವ್ರದ್ಧಿಯಲ್ಲಿ ನಾನು ಸದಾ ನಿಮ್ಮೊಂದಿಗಿರುವೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರ ಅಕ್ಕತಂಗೇರಹಾಳ ಗ್ರಾಮದ ಅಭಿವ್ರದ್ಧಿ ಪರವಾದ ಪ್ರಗತಿ ಪರ ಚಿಂತಕರ ವೇದಿಕೆಯ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಪಟ್ಟಣದ ಕಾರಣವಿಟ್ಟು ಅಭಿವ್ರದ್ಧಿಯನ್ನು ವಿರೋಧಿಸುವದು ಸರಿಯಲ್ಲ. ಜನರಿಗೆ ತಪ್ಪು ಗ್ರಹಿಕೆ ಉಂಟು ಮಾಡಿ ದಾರಿ ತಪ್ಪಿಸುವವರ ಬಗ್ಗೆ ಜನರೇ ಉತ್ತರ ಹೇಳುವ ಕಾಲ ದೂರಿಲ್ಲ. ನನ್ನನ್ನೇ ಬೆಂಬಲಿಸುತ್ತಾ ಬಂದಿರುವ ಅಕ್ಕತಂಗೇರಹಾಳ ನನ್ನ ನೆಚ್ಚಿನ ಗ್ರಾಮ. ಆ ಗ್ರಾಮದ ಅಭಿವ್ರದ್ಧಿಗೆ ನಾನು ಸದಾ ಸಿದ್ಧ. ಕುಂದು,ಕೊರತೆಗಳ ಕುರಿತು ಸದ್ಯದಲ್ಲಿ ಸಭೆ ಕರೆಯಲಾಗುವದು ಎಂದರಲ್ಲದೆ, ಕ್ಷೇತ್ರದಲ್ಲಿನ ಪ್ರತಿಯೊಂದು ಗ್ರಾಮಗಳ ಹಬ್ಬ, ಹರಿದಿನಗಳ ಸೌಂದರ್ಯ ಇಮ್ಮಡಿಗೊಳ್ಳಬೇಕು. ಪ್ರಸಕ್ತ ಅಕ್ಕತಂಗೇರಹಾಳ ಗ್ರಾಮ ದ ಶ್ರೀ ದುರ್ಗಾ ಜಾತ್ರೆಯು ವೈಭವಯುತವಾಗಿ ಆಚರಿಸುವ. ಪೂರ್ವ ಸಿದ್ಧತೆಗೆ ತಮ್ಮ ಸಂಪೂರ್ಣ ಸಹಕಾರವಿರುವದಾಗಿ ಹೇಳಿದರು.
ಮನವಿ ಅರ್ಪಿಸಿ ಮಾತನಾಡಿದ ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಗ್ರಾಮ ಅಭಿವ್ರದ್ಧಿ ಕಾಣದೆ ಬಡವಾಗಿದೆ. ರಸ್ತೆಗಳು, ಗಟಾರುಗಳು, ವರ್ತುಳ ರಸ್ತೆಗಳ ಸ್ಥಿತಿ ಅತಂತ್ರವಾಗಿದ್ದು, ಇವುಗಳ. ಅಭಿವ್ರದ್ಧಿಯಾಗಬೇಕು. ಅಸಮರ್ಪಕ ಕುಡಿವ ನೀರು ಸರಬರಾಜುವಿನಿಂದ ಜನರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಸೂಕ್ತ ಕ್ರಮ ಜರುಗಿಸಬೇಕೆಂದರಲ್ಲದೆ, ನಾವು ಸದಾ ನಿಮ್ಮೊಂದಿಗಿರುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಕ್ಕತಂಗೇರಹಾಳ ಶ್ರೀ ದುರ್ಗಾ ದೇವಸ್ಥಾನ ಕಮಿಟಿ ಅದ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ನಿವ್ರತ್ತ. ಕೆಪಿಎಸ್ಸಿ ಕಾರ್ಯದರ್ಶಿ, ಈರಗೌಡಾ ನಿರ್ವಾಣಿ, ಪತ್ರಕರ್ತ ಸುರೇಶ ಉರಬಿನಹಟ್ಟಿ, ವಿರಾಟ್ ಕಾರ ಸೇಲ್ಸ್ ವ್ಯವಸ್ಥಾಪಕ ಪ್ರಹ್ಲಾದ ಹೊಳೆಯಾಚಿ ಸೇರಿದಂತೆ ಇತರರು ಹಾಜರಿದ್ದರು.