ಬೆಳಗಾವಿ-೨೮ : ಅಪಘಾತದಲ್ಲಿ ಗಾಯಗೊಂಡು ತೀವ್ರ ಸಂಕಷ್ಟಕ್ಕೀಡಾಗಿದ್ದ ಕೂಲಿಕಾರನ ಕುಟುಂಬಕ್ಕೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ ಗ್ರಾಮದ ನಿವಾಸಿ ಕಲ್ಲಪ್ಪಾ ಪಾಡಸ್ಕರ್ ಎಂಬ ವ್ಯಕ್ತಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ರಸ್ತೆಯ ಅಪಘಾತದಲ್ಲಿ ಎಡಗಾಲಿಗೆ ತೀವ್ರವಾದ ಗಾಯಗೊಂಡಿದ್ದರು, ವೈದ್ಯರ ಸೂಚನೆಯ ಮೇರೆಗೆ 3 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ.
ಕೂಲಿ ಕೆಲಸದ ಮೇಲೆಯೇ ಇವರ ಕುಟುಂಬ ಅವಲಂಬಿತವಾಗಿದೆ. ಇವರ ಕಷ್ಟ ತಿಳಿದ ತಕ್ಷಣ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಿ, ಪಾಡಸ್ಕರ ಕುಟುಂಬದ ಕಷ್ಟಕ್ಕೆ ಸ್ಪಂದಿಸಲಾಯಿತು.
ಈ ವೇಳೆ ನಿಂಗಪ್ಪಾ ಮೊದಗೆಕರ್, ದೀಪಕ ಕೇತ್ಕರ್, ಚಂದ್ರಕಾಂತ ಮೊದಗೆಕರ್, ಬಸವಂತ ಪಾಟೀಲ, ಬರಮಾ ಪಾಟೀಲ ಸೇರಿದಂತೆ ಇತರರು ಹಾಜರಿದ್ದರು.