23/12/2024
IMG-20240928-WA0032

ಜೈನ ಧರ್ಮದ ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾ ಮಹಾ ಮಹೋತ್ಸವ
ಬೆಳಗಾವಿ-೨೮ : ಜೈನ ಧರ್ಮಿಯರು ತಮ್ಮ ಧರ್ಮಕ್ಕೆ ತೋರುವ ಶ್ರದ್ಧೆ, ಕಾಳಜಿ, ಪ್ರೀತಿ ನಿಜಕ್ಕೂ ಮೆಚ್ಚುವಂಥದ್ದು, ಇದನ್ನು ನೋಡುತ್ತಿದ್ದರೆ ದೇಶದ ಸಂಸ್ಕೃತಿ ಮುಂದಿನ ಸಾವಿರಾರು ವರ್ಷಗಳ ಕಾಲ ಜೀವಂತವಾಗಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬಸ್ತವಾಡ ಗ್ರಾಮದಲ್ಲಿ ಶನಿವಾರ ನಡೆದ ಜೈನ ಧರ್ಮದ ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾ ಮಹಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಅಹಿಂಸಾ ಪರಮೋ ಧರ್ಮ ಎನ್ನುವ ನಮ್ಮ ಜೈನ ಧರ್ಮ ಶ್ರೇಷ್ಠ ಧರ್ಮ ಎಂದು ಹೇಳಿದರು.

ಇಂದು ಜೈನ ಮುನಿಗಳ ಆಶೀರ್ವಾದ ಪಡೆದಿರುವೆ, ಮುನಿಗಳು ಯಾವಾಗಲೂ ನನಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ನಾನು ಕಾರ್ಯನಿರ್ವಹಿಸುತ್ತಾ ಬಂದಿರುವೆ. ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾ ಮಹಾ ಮಹೋತ್ಸವಕ್ಕೆ ವೈಯಕ್ತಿಕವಾಗಿ ನಾನು ಯಾವುದೇ ನೆರವು ನೀಡುವುದಕ್ಕೆ ಬದ್ಧನಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬ ಸದಸ್ಯರು ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ವೇಳೆ ಪರಮ ಪೂಜ್ಯ ಡಾ.ಬಾಲಾಚಾರ್ಯ ಶ್ರೀ 108 ಸಿದ್ಧಸೇನಾ ಮುನಿ ಮಹಾರಾಜರು, ಕೊಲ್ಹಾಪುರದ ಪರಮ ಪೂಜ್ಯ ಜಗದ್ಗುರು ಜಗಭೂಷನ ಜಗತ್ವೊಜ್ಜ್ಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ವರೂರಿನ ಪರಮಪೂಜ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಸ್ತಿ ಶ್ರೀ ಧರ್ಮಸೇನ ಸ್ವಾಮೀಜಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!