ಬೆಳಗಾವಿ-೨೭: ಸ್ವಾತಂತ್ರ್ಯದ ಬೆಳ್ಳಿಚುಕ್ಕಿ, ವೀರವನಿತೆ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಚನ್ನಮ್ಮ ವಿಜಯ ಸಾಧಿಸಿ 200 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯನ್ನು ಪ್ರಸಕ್ತ ವರ್ಷ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ವಿಜಯೋತ್ಸವದ 200 ನೇ ವರ್ಷಾಚರಣೆ ಸ್ಮರಣೀಯ ಹಾಗೂ ಅರ್ಥಪೂರ್ಣವಾಗಿಸುವ ಉದ್ಧೇಶದಿಂದ “ಲಾಂಛನ(ಲೋಗೋ)” ಆಹ್ವಾನಿಸಲಾಗಿದೆ.
ಕಿತ್ತೂರು ಚನ್ನಮ್ಮನ ಆಡಳಿತ ಕಾಲದ ಕಲೆ-ಸಂಸ್ಕೃತಿ, ನಂದಿಧ್ವಜ, ರಾಜಗುರು ಸಂಸ್ಥಾನ ಮತ್ತು ಭವ್ಯ ಪರಂಪರೆ ಒಳಗೊಂಡ ಲಾಂಛನಗಳನ್ನು ಆಹ್ವಾನಿಸಲಾಗಿದೆ.
ಕಲಾವಿದರು ಹಾಗೂ ಸಾರ್ವಜನಿಕರು ಈ ವಿಷಯಾಧಾರಿತವಾಗಿ ಲಾಂಛನವನ್ನು ಕಳುಹಿಸಬಹುದು. ಅತ್ಯುತ್ತಮ ಲಾಂಛನ ರಚಿಸಿದವರಿಗೆ 10 ಸಾವಿರ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಲಾಂಛನಗಳನ್ನು ಸೆಪ್ಟೆಂಬರ್ 29, 2024 ರ ಸಂಜೆ 5 ಗಂಟೆಯ ಒಳಗಾಗಿ [email protected] ಅಥವಾ [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.