*ಪತ್ತಿನ ಸಹಕಾರ ಸಂಘಗಳು ಉನ್ನತಿಕರಣಗೊಂಡು ಇನ್ನಷ್ಟು ಬಲಿಷ್ಠವಾಗಬೇಕೆಂದು ರಾಷ್ಟ್ರೀಯ ಸಹಕಾರ ಒಕ್ಕೂಟದ ಮಹಾಸಭೆಯಲ್ಲಿ ಡಾ ಸಂಜಯ ಪಂಚಾಕ್ಷರಿ ಹೊಸಮಠ ಮಂಡನೆ*
ಇದೇ ಭುದವಾರ ದಿನಾಂಕ 25/09/24 ರಂದು ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸಹಕಾರ ಒಕ್ಕೂಟದ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಡಾ ಸಂಜಯ ಪಂಚಾಕ್ಷರಿ ಹೊಸಮಠ ಪತ್ತಿನ ಸಾಕಾರ ಸಂಘಗಳನ್ನು ಉನ್ನತೀಕರಣ ಗೊಳಿಸಲು ಹಾಗೂ ಸಹಕಾರ ಪತ್ತಿನ ಸಂಘಗಳನ್ನು ಇನ್ನಷ್ಟು ಸದೃಢಗೊಳಿಸಲು ಕೆಲವೊಂದಿಷ್ಟು ಅಂಶಗಳನ್ನು ವೇದಿಕೆ ಮೇಲೆ ರಾಷ್ಟ್ರೀಯ ಒಕ್ಕೂಟದ ಆಡಳಿತ ಮಂಡಳಿ ಹಾಗೂ ಹಾಗೂ ಸರ್ವ ಸಾಧಾರಣ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ ನೂರಾರು ಸಹಕಾರಿಗಳ ಸಮ್ಮುಖದಲ್ಲಿ ಪ್ರಸ್ತಾವನೆ ಮಂಡಿಸಿದರು.
(1) ಪತ್ತಿನ ಸಂಘಗಳಿಗೆ ಆದಾಯ ತೆರಿಗೆ (INCOME TAX) ಕೆಲವೊಂದಿಷ್ಟು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕೆಂದು ಕೋರಿದರು.
(2) ಪತ್ತಿನ ಸಹಕಾರಿ ಸಂಘಗಳಲ್ಲಿ ಹೂಡಿಕೆದಾರರಿಗೆ ವಿಮೆಯ (INSURANCE) ಅವಶ್ಯಕತೆಯ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಸಭೆಗೆ ಮನವರಿಕೆ ಮಾಡಿಕೊಟ್ಟರು. ಈಗಾಗಲೇ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಸಹಕಾರಿ ಬ್ಯಾಂಕುಗಳಿಗೆ ಅನುಕೂಲ ಮಾಡಿಕೊಟ್ಟಿದೆ ಅದೇ ರೀತಿ ನಮ್ಮ ಪತ್ತಿನ ಸಂಘಗಳಿಗು ಕೂಡ ಮಾಡಿಕೊಡಬೇಕೆಂದು ವಿನಂತಿಸಿದರು.
(3) ಕೇಂದ್ರ ಸರ್ಕಾರವು ಖಾಸಗಿ ಬ್ಯಾಂಕುಗಳ ಸಾಲ ವಸುಲಾತಿಯಲ್ಲಿ ಸರ್ಫೇಸಿ ಕಾಯ್ದೆಯನ್ನು *(SARAFAESI ACT)* ಅಳವಡಿಸಿದ್ದು ಅದೇ ರೀತಿ ಕಾಯ್ದೆಯನ್ನು ಪತ್ತಿನ ಸಂಘಗಳ ಸಾಲ ವಸುಲಾತಿಗೆ ಅಳವಡಿಸಿದರೆ ತುಂಬಾ ಅನುಕೂಲವಾಗುವುದೆಂದು ವಿಮರ್ಷಿಸಿದರು.
(4) Credit Information Bureau (India) Limited
CBIL Scoring
ಈ ತರಹದ ಸುವಿಧಗಳನ್ನು ಪತ್ತಿನ ಸಂಘಗಳಿಗೆ ಒದಗಿಸಿದರೆ ಸಂಘಗಳು ಸದಸ್ಯರಿಗೆ ಸಾಲ ಕೊಡುವ ಮುನ್ನವೇ ಎಚ್ಚೆತ್ತುಕೊಳ್ಳುತ್ತಾರೆ
ಇದರಿಂದ ಸಂಘಗಳು ಸಾಲಗಾರರಿಂದ ಮೋಸ ಹೋಗುವ ಪ್ರಮಾಣದಲ್ಲಿ ಬಹುತೇಕ ಇಳಿಕೆಯಾಗುತ್ತದೆ.
(5) ಬಹಳಷ್ಟು ಪತ್ತಿನ ಸಂಘಗಳು ಗ್ರಾಮೀಣ ಅರೆ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವದಿಂದ *National payment gateway* ಅಂತ ಸೌಲಭ್ಯಗಳನ್ನು ಪತ್ತಿನ ಸಂಘಗಳಿಗೆ ಒದಗಿಸಿದರೆ ಸಾಕಷ್ಟು ಗ್ರಾಮೀಣ ಜನತೆಗೆ ಅನುಕೂಲವಾಗುವುದೆಂದು ವಿವರಿಸಿದರು.
ಈ ಸಂದರ್ಭದಲ್ಲಿ ಪತಿನ ಮಾವ ಮಂಡಳದ ಅಧ್ಯಕ್ಷರಾದ ವಿ ರಾಜು ಹಾಗೂ ಇನ್ನೂರು ನಿರ್ದೇಶಕರಾದ ಶ್ರೀ ಹೊನ್ನಯ್ಯ ವಿ ಹಿರೇಮಠ ಉಪಸ್ಥಿತಿರಿದ್ದರು.