ಬೆಳಗಾವಿ-೨೨: ಪ್ರತಿವಾರ ನಡೆಯುವ ವಚನೋತ್ಸವ ಕಾಯಕ್ರಮ ರವಿವಾರ ಜರುಗಿತು.ಈ ನಿಮಿತ್ತ ಉಳವಿ ಚನ್ನಬಸವೇಶ್ವರ ದೆವಸ್ಥಾನದ ರಥ ತಯಾರಿಸುವಲ್ಲಿ ನೇತೈತ್ವ ವಹಿಸಿದ್ದ ಶತಾಯುಸಿ ವಿರಪ್ಪ ಬಡಿಗೇರ ಅವರನ್ನು ರಾಮತೀಥ ನಗರದ ಅವರ ನಿವಾಸದಲ್ಲಿ ಸತ್ಕರಿಸಲಾಯಿತು.
10 ಜನ ತಂಡದೋದಿಗೆ ಸತತ ಒಂದು ವಷ೯ ಉಳವಿಯಲ್ಲಿ ರಥ ತಯಾರಿಸಿದ್ದನ್ನು ವೀರಪ್ಪ ಬಡಿಗೇರ ಅವರು ಸ್ಮರಿಸಿದರು .
ಗಣ್ಯರಾದ ನಿರುಪಾದಯ್ಯ ಕಲ್ಲೋಳಿಮಠ, ಬಸವರಾಜ ಕಮ್ಮಾರ , ಮಲ್ಲಿಕಾಜು೯ನ ಶಿರಗುಪ್ಪಿ ಶೆಟ್ಟರ ಇವರು ಶಾಲು ಹೋದಿಸಿ ಗೌರವಿಸಿದರು.
ಈ ಸಂದಭದಲ್ಲಿ ಗೋಪಾಲ ಖಟಾವಕರ ಸಿದ್ದಪ್ಪಾ ಪೂಜಾರಿ, ಶಿವಲಿಂಗ ಬೇಂಡಿಗೆರಿ, ಭೀಮನಗೌಡ ಪಾಟೀಲ, ರಾಜಕುಮಾರ ಮ್ಯಾಗೋಟಿ, ಬಿ.ಎಚ್ ,ಮಾರದ ಸೇರಿದಂತೆ ಅನೇಕರು ಭಾಗವಹಿಸಿದ್ದರು.