ಬೆಳಗಾವಿ-೨೧:ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದ ನಿವಾಸಿ ಶ್ರೀಮತಿ ಆಶಾ ಸು. ತಳವಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡು, ಬದುಕು ಕಟ್ಟಿಕೊಂಡಿರುವುದನ್ನು ಕೇಳಿ, ಖುಷಿಯಾಯಿತು.
ಗೃಹಲಕ್ಷ್ಮೀ ಯೋಜನೆ ಇಂದು ಲಕ್ಷಾಂತರ ಮಹಿಳೆಯರ ಕನಸುಗಳನ್ನು ಸಾಕಾರಗೊಳಿಸಿ, ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದೆ. ನಿಮ್ಮ ಜೀವನದಲ್ಲೂ ಗೃಹಲಕ್ಷ್ಮಿ ಯೋಜನೆಯಿಂದಾದ ಪ್ರಯೋಜನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
– ಲಕ್ಷ್ಮೀ ಹೆಬ್ಬಾಳಕರ್,
ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.