ಬೆಳಗಾವಿ-೧೮: ಸ್ಥಳೀಯ ಕಾರಂಜಿ ಮಠದ ಶ್ರೀ ಗುರು ಕುಮಾರೇಶ್ವರ ಸಂಗೀತ ಬಳಗದ ವತಿಯಿಂದ ಪಂ. ಪುಟ್ಟರಾಜ ಗವಾಯಿಗಳವರ 14ನೇ ವರ್ಷ ಪುಣ್ಯ ಸ್ಮರಣೆ ಕಾರ್ಯಕ್ರಮ ದಿ. 15 ರಂದು ಮಾಂತೇಶ್ ನಗರದ ಮಲ್ಲವ್ವ ಕನಗೌಡ್ರ್ ಅವರ ನಿವಾಸದಲ್ಲಿ ಜರುಗಿತು.
ಗಂದಿವಾಡದ ಶ್ರೀ ಮೃತ್ಯುಂಜಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಅವರು ತಮ್ಮ ಆಶೀರ್ವಚನದಲ್ಲಿ ಪುಟ್ಟರಾಜ ಗವಾಯಿಗಳವರ ಸಾಧನೆ ಹಾಗೂ ವ್ಯಕ್ತಿತ್ವ ಕುರಿತು ವಿವರಿಸಿದರು.
ಈ ನಿಮಿತ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಹನಾ, ಲತೀಕಾ, ಲಾವಣ್ಯ, ಚೈತ್ರ, ವಿನೂತ, ಇವರು ಗಾಯನ ಹಾಡಿದರು. ಶಂಕರ್ ಬೇವಿನಗಿಡದ ಹಾರ್ಮೋನಿಯಂ ನುಡಿಸಿದರು. ಶರಣಪ್ಪ ಗೊಂಗೊಡ್ ಶೆಟ್ಟರ್ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ನಿರುಪಾದಯ್ಯ ಕಲ್ಲೋಳಿಮಠ, ರಾಯಣ್ಣವರ್, ಬಿ ಎಚ್ ಮಾರದ್, ಸುರೇಶ್ ಪಟಗುಂದಿ, ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ್, ಅಬಿಸ್ ಚಿದಂಬರ್, ಸೇರಿದಂತೆ ಇತರರು ಭಾಗವಹಿಸಿದ್ದರು. ಬಸವರಾಜ್ ಕಮ್ಮಾರ್ ನಿರೂಪಿಸಿದರು. ಸಿದ್ದಪ್ಪ ಪೂಜಾರಿ ವಂದಿಸಿದರು.