23/12/2024
IMG-20240912-WA0006

ಬೆಳಗಾವಿ-೧೨:ರಾಷ್ಟ್ರೀಯ ಮಟ್ಟದ ಒಕ್ಕೂಟ ಉಳಿಸಿ ಆಂದೋಲನದಿಂದ ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ಸೆ.14 ರಂದು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಅರವಿಂದ್ ದಳವಾಯಿ ತಿಳಿಸಿದರು.

ಬೆಳಗಾವಿಯಲ್ಲಿ  ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರಾಜ್ಯಗಳ ಒಕ್ಕೂಟ ಇದನ್ನು ಉಳಿಸಿಕೊಳ್ಳುವ ಅಗತ್ಯ ಎಲ್ಲರ ಮೇಲಿದೆ. ಕಳೆದ ಕೆಲ ವರ್ಷಗಳಿಂದ ಒಕ್ಕೂಟದ ಆಂದೋಲನದ ಮೇಲೆ ಮೋದಿ ಸರಕಾರದ ಬಹಳ ವ್ಯವಸ್ಥಿತವಾಗಿ ಆರ್ಥಿಕ, ಸಂಸ್ಕೃತಿಕ ವ್ಯವಸ್ಥೆಯ ಮೇಲೆ ದಾಳಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಎರಡೂ ರಾಜ್ಯದ ಮುಖ್ಯಮಂತ್ರಿಗಳನ್ನು ದುರುದ್ದೇಶದಿಂದ ಅವರನ್ನು ಜೈಲಿಗೆ ಹಾಕಿದರು. ರಾಷ್ಟ್ರಪತಿ ಮೂಲಕ ದೆಹಲಿ ಸರಕಾರವನ್ನು ವಜಾಗೊಳಿಸುವ ಹುನ್ನಾರ ಬಿಜೆಪಿ ನಡೆಸಿದೆ ಎಂದರು. ಕರ್ನಾಟಕದಲ್ಲಿ 136 ಶಾಸಕರನ್ನು ಒಳಗೊಂಡ ಕಾಂಗ್ರೆಸ್ ಸರಕಾರವನ್ನು ಕೂಡ ವಜಾಗೊಳಿಸಬೇಕು ಎನ್ನುವ ಹುನ್ನಾರ ಕೇಂದ್ರ ಬಿಜೆಪಿ ಸರಕಾರ ರಾಜ್ಯಪಾಲರನ್ನು ದುರುಪಯೋಗ ಪಡೆಸಿಕೊಂಡು ಕಾಂಗ್ರೆಸ್ ಸರಕಾರ ಪತನಗೊಳಿಸಲು ನೋಡುತ್ತಿದ್ದಾರೆ‌ ಎಂದು ಆರೋಪಿಸಿದರು.

error: Content is protected !!