23/12/2024
IMG_20240912_162536

ಬೆಳಗಾವಿ-೧೨: ನಗರದ ಸಮಾದೇವಿ ಗಲ್ಲಿಯಲ್ಲಿ ಜೋಸ್ ಅಲುಕ್ಕಾಸ್ ನೂತನ ಚಿನ್ನಾಭರಣ ಮಳಿಗೆ ಶನಿವಾರ ಉದ್ಘಾಟನೆಗೊಂಡಿತು.

ಕರ್ನಾಟಕದಲ್ಲಿ ತೆರೆದಿರುವ 14ನೇ ಮಳಿಗೆಯನ್ನು ಶಾಸಕ ಆಸೀಫ್ ಸೇರ್ ಉದ್ಘಾಟಿಸಿದರು. ಚಲನಚಿತ್ರ ನಟಿ ಶರಣ್ಯ ಶೆಟ್ಟಿ, ಜೋಸ್ ಅಲುಕ್ಕಾಸ್ ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಅಲುಕ್ಕಾ, ಪೌಲ್‌ಜಿ ಅಲುಕ್ಕಾ, ಜಾನ್‌ ಅಲುಕ್ಕಾ, ಮಹಾನಗರ ಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ ಇತರರಿದ್ದರು.

“ನವೀನ ಮಾದರಿಯ ಚಿನ್ನ, ಬೆಳ್ಳಿ, ಪ್ಲಾಟಿನಂ ಹಾಗೂ ವಜ್ರದ ಆಭರಣಗಳು ಈ ಮಳಿಗೆಯಲ್ಲಿ ಲಭ್ಯ ಇವೆ. ನೂತನ ಮಳಿಗೆ ಉದ್ಘಾಟನೆ ಹಿನ್ನೆಲೆಯಲ್ಲಿ ಸೆ.11ರವರೆಗೆ ಕನಿಷ್ಠ ?60 ಸಾವಿರ ಮೌಲ್ಯದ ಚಿನ್ನ ಅಥವಾ ವಜ್ರದ ಆಭರಣ ಖರೀದಿಸುವವರಿಗೆ ಉಚಿತವಾಗಿ ಚಿನ್ನದ ನಾಣ್ಯ ನೀಡಲಾಗುವುದು. ವಜ್ರದ ಆಭರಣಗಳ ಮೇಲೆ ಶೇ 20, ಪ್ಲಾಟಿನಂ ಆಭರಣಗಳ ಮೇಲೆ ಶೇ 7ರಷ್ಟು ರಿಯಾಯಿತಿ ಸೌಲಭ್ಯವಿದೆ. ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಜೋಸ್ ಅಲುಕ್ಕಾಸ್‌ನ ಅಧ್ಯಕ್ಷರಾದ ಜೋಸ್ ಅಲುಕ್ಕಾ ಈ ಸಂದರ್ಭದಲ್ಲಿ ತಿಳಿಸಿದರು.

error: Content is protected !!