23/12/2024
IMG-20240110-WA0024

ಬೆಳಗಾವಿ-10: ಇಂದಿನ ವಿದ್ಯಾರ್ಥಿಗಳಲ್ಲಿ ಶೈಕ್ಷಣೀಕ ಮತ್ತು ದೈಹಿಕ ಬೆಳವಣಿಗೆಗಳು ದೇಶಕ್ಕೆ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶೀಕ್ಷಣದ ಜೊತೆಗೆ ದೈಹಿಕವಾಗಿಯೂ ಸಹ ಸದೃಢರಾಗಬೇಕೆಂದು ಭಾರತೀಯ ನೌಕಾದಳದ ನಿವೃತ್ತ ಕಮಾಂಡರ್ ಇಂದುಪ್ರಭಾ ವ್ಹಿ. ಅವರು ಅಭಿಪ್ರಾಯಪಟ್ಟರು.

ಮಂಗಳವಾರ ಸಾಯಂಕಾಲ ಭರತೇಶ ಶೀಕ್ಷಣ ಸಂಸ್ಥೆಯ ಭರತೇಶ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಧಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವುದು ಅತೀ ಮಹತ್ವದ್ದಾಗಿದೆ. ಅದರ ಜೊತೆಗೆ ದೈಹಿಕವಾಗಿ ಸದೃಢಗೊಳಿಸುವುದು ಸಹ ಅಷ್ಟೆ ಮಹತ್ವದ್ದಾಗಿದೆ . ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಕಠಿಣ ಶ್ರಮವಹಿಸಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅವರು ತಿಳಿಸಿದರು.
ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ, ಪಾಲಕರು ತಮ್ಮ ಮಕ್ಕಳ ಭವಿಷ್ಯದತ್ತ ಚಿಂತನೆ ನಡೆಸಬೇಕು. ಪ್ರತಿನಿತ್ಯದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಅವರಿಗೆ ಸಕಾಲದಲ್ಲಿ ಸಲಹೆಗಳನ್ನು ನೀಡಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಉಪಾಧ್ಯೆ ಅವರು ಮಾತನಾಡಿ, ಮಕ್ಕಳನ್ನು ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೆಪಿಸುವುದು ಪಾಲಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಜೆನಿಫರ ಅವರು ವಹಿಸಿದ್ದರು. ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಪುಷ್ಪದಂತ ದೊಡ್ಡಣ್ಣವರ, ಹೀರಚಂದ ಕಲಮನಿ, ಸಂಜೀವ ದೊಡ್ಡಣ್ಣವರ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಯೋಗಿತಾ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿ. ವಾರ್ಷಿಕ ವರದಿ ವಾಚನ ಮಾಡಿದರು. ಸಂತೋಷಕುಮಾರ ಮಡಿವಾಳರ ಅತಿಥಿಗಳನ್ನು ಪರಿಚಯಿಸಿದರು. ಜೆ.ಎಂ. ತಹಶಿಲ್ದಾರ ಕಾರ್ಯಕ್ರಮ ನಿರೂಪಿಸಿದರು. ರಾಬರ್ಟ ಫರ್ನಾಂಡಿಸ ವಂದಿಸಿದರು.

 

error: Content is protected !!