23/12/2024
IMG-20240911-WA0004

ಬೈಲಹೊಂಗಲ-೧೧: ಭಾರತಕ್ಕೆ ಸ್ವಾತಂತ್ರ್ಯಕೊಡಿಸುವಲ್ಲಿ ಯಶಸ್ವಿಯಾದ ವಕೀಲರು, ಪಂಚಮಸಾಲಿ 2ಎ ಮೀಸಲಾತಿ ಹೊರಾಟಕ್ಕೆ ಧುಮಕಿರುವದರಿಂದ ಮೀಸಲಾತಿ ದೊರೆಯುವದರಲ್ಲಿ ಸಂದೇಹವೆ ಇಲ್ಲ ಎಂದು ಮಿಸಲಾತಿ ಪ್ರವರ್ತಕ ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ವಕೀಲರ ಸಭೆಯಲ್ಲಿ ಆರ್ಶಿವಚನ ನೀಡಿದ ಅವರು, ಕಣ್ಣಿದ್ದು ಕುರಾಡಾದ, ಕಿವಿಯಿದ್ದು ಕಿವುಡಾದ ಪ್ರಸ್ತುತ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಮನ್ನನೆ ಸಿಗದಿರುವದು ಹಾಗೂ ನಮ್ಮ ಸಮಾಜದ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತದೆ ಇರುವದು ಬೇಸರ ತಂದಿದೆ. ಸಮಾಜದ ವಕೀಲರು ಹೋರಾಟಕ್ಕೆ ಇಳಿದಿರುವದರಿಂದ ಮೀಸಲಾತಿ ಹೋರಾಟ ತಾರ್ಕಿಕ ಅಂತ್ಯ ಕಾನುವ ಭರವಸೆ ಇದೆ. ದೇಶವನ್ನ ಕೊಳ್ಳೆ ಹೊಡೆದ ಬ್ರಿಟಿಷರೆ ವಕೀಲರ ಹೋರಾಟಕ್ಕೆ ಮಣಿದು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ನಮ್ಮವರಿಂದಲೆ ಇಂದು ಕಘಂಟಾಗಿರುವ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಕೀಲರ ನೇತೃತ್ವದಲ್ಲಿ ಮುನ್ನೆಡುಸುವ ಉದ್ದೇಶದಿಂದ ಮತ್ತು ಸಮಾಜದ ವಕೀಲರು ಸಂಘಟನೆಯ ಸದುದ್ದೇಶದಿಂದ ಸೇ22 ರಂದು ಸಾವಿರಾರು ವಕೀಲರು ಹೋರಾಟದ ಶಕ್ತಿ ಕೇಂದ್ರ ಬೆಳಗಾವಿಯಲ್ಲಿ ಸೇರಿ ಮುಂದಿನ ಹೋರಾಟದ ನಿರ್ಣಯ ತಗೆದುಕೊಳ್ಳಲಾಗುವದು ಎಂದರು.
ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಮಾತನಾಡಿ, ಸಮಾಜದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅರ್ಹತೆ ಇದ್ದ ವಿದ್ಯಾವಂತರಿಗೆ ಮಿಸಲಾತಿ ಇಲ್ಲದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾಜದ ಯುವಕರಿಗೆ ಅನ್ಯಾಯವಾಗುತ್ತಿದೆ. ಪಂಚಮಸಾಲಿಗಳು ಒಂದಾದರೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೆರಿಸುತ್ತದೆ. ಸಮಾಜ ಒಡೆಯುವ ಕೆಲಸ ಯಾರು ಮಾಡಬಾರದು. ಅಂತವರಿಗೆ ಪಾಠ ಕಲಿಸಬೇಕೆಂದೆರು.
ಅಧ್ಯಕ್ಷತೆವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವೆಂಕಿ ಮಾತನಾಡಿ, ಜಾತಿ ಆಧಾರಿತ ಮಿಸಲಾತಿ ಬಡತನ ರೇಖೆಗಿಂತ ಕೆಳಗಿರುವ ಪಂಚಮಸಾಲಿಗಳಿಗೆ ಕಬ್ಬಿಣದ ಕಡಲೆಯಾಗಿದೆ. ಕೃಷಿ ಆಧಾರಿತ ಲಿಂಗಾಯತ ಪಂಚಮಸಾಲಿ ಸಮಾಜಕ್ಕಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿಲು ಹಾಗೂ ಮುಂದಿನ ಪಿಳಿಗೆಯ ಜೀವನಕ್ಕಾಗಿ ಮೀಸಲಾತಿ ಅತ್ಯವಶ್ಯಕವಾಗಿ ಬೇಕಾಗಿದ್ದರಿಂದ ಸಮಾಜದಲ್ಲಿ ನ್ಯಾಯಕೊಡಿಸುವ ನ್ಯಾಯವಾದಿಗಳಾಗಿ ಹೋರಾಟವನ್ನು ಯಶಸ್ವಿಯಾಗಿಸೊಣ ಎಂದರು.
ತಾಲೂಕಾ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಆರ್.ಸಿ.ಪಾಟೀಲ, ಸಿ.ಎಸ್.ಚಿಕ್ಕಣಗೌಡರ, ಎಫ್.ಎಸ್.ಸಿದ್ದನಗೌಡರ, ಎಸ್.ಎಮ್.ಅಬ್ಬಾಯಿ, ಅಶೋಕ ಶಿದ್ರಾಮನಿ ಮಾತನಾಡಿದರು.
ವೇದಿಕೆಯ ಮೇಲೆ ಬಿ.ಎಸ್.ಕಿವಡಸಣ್ಣವರ, ಎಮ್.ವಾಯ್.ಸೊಮಣ್ಣವರ, ಜಿ.ಬಿ.ಶೀಗಿಹಳ್ಳಿ, ಮಹಾಂತೇಶ ಮತ್ತಿಕೊಪ್ಪ, ಎಸ್.ಎಸ್.ಮಠದ, ಇದ್ದರು.
ಇದೆ ಸಂದರ್ಭದಲ್ಲಿ ಬೈಲಹೊಂಗಲ ನಾಡಿನ ಲಿಂಗಾಯತ ಪಂಚಮಸಾಲಿ ಕಾನೂನು ಘಟಕದ ಅಧ್ಯಕ್ಷರಾಗಿ ಮಂಜುನಾಥ ಸೋಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ವಣ್ಣೂರ, ಉಪಾಧ್ಯಕ್ಷರಾಗಿ ಆನಂದ ನರಸಣ್ಣವರ, ಖಜಾಂಚಿಯಾಗಿ ಅನಿಲ ಕರಬಣ್ಣವರ ಹಾಗೂ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರ ಸಂಘಟನಾ ಜಿಲ್ಲಾ ಅಧ್ಯಕ್ಷರಾಗಿ ಬಾಳನಗೌಡ ಪಾಟೀಲರನ್ನು ಆಯ್ಕೆ ಮಾಡಿ ಪೂಜ್ಯರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಮುರಿಗೆಪ್ಪ ಗೂಂಡ್ಲೂರ, ಮಹೇಶ ಹರಕುಣಿ, ರಾಜು ಸೊಗಲ, ಎಸ್.ಎಸ್.ಅಲದಕಟ್ಟಿ ವಿ.ಎಸ್.ಸಂಗೊಳ್ಳಿ, ಮಹಾಂತೇಶ ಚಿಕ್ಕೊಪ್ಪ, ವಿಶ್ವನಾಥ ಪಾಟೀಲ, ಮಹಾಂತೇಶ ಹೊಸಮನಿ, ಬಿ.ಬಿ.ಹುಲಮನಿ, ಪಿ.ಡಿ.ಮರಕಟ್ಟಿ, ರಾಜು ಕುಡಸೋಮಣ್ಣವರ, ಎಸ್.ಬಿ.ರೊಟ್ಟಿ. ಸಿ.ಪಿ.ಈಟಿ, ಎಸ್.ವಾಯ್.ಪಾಟೀಲ, ಆನಂದ ತುರಮರಿ, ರುದ್ರಪ್ಪ ಹೊಸಮನಿ ಸೇರಿದಂತೆ ನೂರಾರೂ ನ್ಯಾಯವಾದಿಗಳು ಸೇರಿದಂತೆ ಇತರರು ಹಾಜರಿದ್ದರು.

error: Content is protected !!