ಬೆಳಗಾವಿ-೧೦:ಮಹೇಶ್ ಪ ಪೂ ಕಾಲೇಜ್ ಹಾಗೂ ತನ್ಮಯ ಚಿಂತನ ಚಾವಡಿ ಹಾಗೂ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಸ ರಾ ಸುಳಕೊಡೆ ಅವರ ಆಯ್ದ ಕೃತಿಗಳ ವಿಮರ್ಶಾ ಕೃತಿ ” ಮಿಂಚಿನ ಗೊಂಚಲು” ಭಾನುವಾರದಂದು ಮಹೇಶ್ ಪ ಪೂ ಕಾಲೇಜಿನಲ್ಲಿ ಜರುಗಿತು. ಈ ಕೃತಿಯನ್ನು ಮಂಗಳೂರಿನ ಸಾಹಿತಿ ಡಾ ಕೊಳ್ಚಪ್ಪೆ ಗೋವಿಂದ ಭಟ್ ಸಂಪಾದನೆ ಮಾಡಿದ್ದಾರೆ. ತನ್ಮಯ ಪ್ರಕಾಶನದ ಅಶೋಕ್ ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮತ್ತು ವಿಮರ್ಶಕರಾದ ಡಾ ಎಫ್ ಡಿ ಗಡ್ಡಿಗೌಡರ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ ಸ ರಾ ಸೂಳಕೂಡೆ ಅವರ 50 ಸಂಪಾದಿತ ಪುಸ್ತಕಗಳ ವಿಮರ್ಶೆ ಒಂದೇ ಪುಸ್ತಕದಲ್ಲಿ ಹಿಡಿದಿಡುವ ಕಾರ್ಯ ಶ್ಲಾಘನೀಯ. ವಿಮರ್ಶೆ ಎಂದರೆ ತೀರ್ಪು,ಮೌಲ್ಯ ನಿರ್ಣಯ, ಗುಣ ದೋಷ ವಿವೇಚನೆ. ಕೃತಿಯನ್ನ ಅಪೇಕ್ಷಿಸಿ ಹಿರಿಮೆ ಗರಿಮೆಯನ್ನ ವಿಶ್ಲೇಷಿಸಿ ಸಾಹಿತ್ಯ ಸಾರ್ಥಕ ತೀರ್ಪು ತೀರ್ಮಾನ ವಿಮರ್ಶೆ ಎಂದರು. ಶರಣ ಅಶೋಕ್ ಮಳಗಲಿ ಅವರು ಕೃತಿ ಪರಿಚಯಿಸುತ್ತಾ ಅವರ ಕೃತಿಗಳು ವಸ್ತುವಿನ ಹರಹವನ್ನು ನೋಡಿದರೆ ಐತಿಹಾಸಿಕ, ಸಾಮಾಜಿಕ, ವಚನಗಳು, ತಾತ್ವಿಕ ಮನೋಧರ್ಮ,ವ್ಯಕ್ತಿ ಚಿತ್ರಗಳು, ಎಲ್ಲ ವಿಷಯವನ್ನ ಒಳಗೊಂಡಿದೆ; ಅವರು ಸಾತ್ವಿಕರು ಪ್ರಚಾರಪ್ರಿಯರಲ್ಲ,ಆದರೆ ಅಪಾರ ಸಂಪಾದಿತ ಕೃತಿಗಳು ಹೊರಬಂದಿವೆ ಎಂದರು. ಶಶಿಕಾಂತ ಗುಂಡು ಕಲ್ಲೇ ನಿವೃತ್ತ ತಹಸಿಲ್ದಾರ್, ಧಾರವಾಡದ ಸಾಹಿತ್ಯ ಪ್ರವರ್ತಕ ವಿದ್ಯಾಧರ್ ಮುತಾಲಿಕ್, ಮತ್ತು ಹಿರಿಯ ಸಾಹಿತಿ, ಸ ರಾ ಸುಳಕೂಡೆ ಮತ್ತು ಕೃತಿಕಾರರ ವೇದಿಕೆಯ ಮೇಲಿದ್ದರು. ಹುಬ್ಬಳ್ಳಿಯ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ್, ಮಂಗಳೂರಿನ ವೈದ್ಯ ಸಾಹಿತಿ ಸುರೇಶ್ ನೆಗಳಗುಳಿ, ಅತಿಥಿಗಳಾಗಿ ಆಗಮಿಸಿದ್ದರು. “ಮಿಂಚಿನ ಗೊಂಚಲು” ಕೃತಿಗೆ ವಿಮರ್ಶೆ ಲೇಖನ ಬರೆದ ಡಾ.ನಿರ್ಮಲಾ ಬಟ್ಟಲ್, ಬಸವರಾಜ ಗಾಗಿ೯,ಎಂ ವೈ ಮೆಣಸಿನಕಾಯಿ, ಡಾ ಸುನಿಲ್ ಪರೀಟ, ಮೀನಾಕ್ಷಿ ಸೂಡಿ,ಡಾ ಅನ್ನಪೂರ್ಣ ಹಿರೇಮಠ,ವಿದ್ಯಾಧರ್ ಮುತಾಲಿಕ್ ದೇಸಾಯಿ, ಸುರೇಶ್ ಉರುಬನಟ್ಟಿ -ವಿಮರ್ಶಕರು ಸಭೆಯಲ್ಲಿ ಹಾಜರಿದ್ದರು.
ವೇದಿಕೆಯಲ್ಲಿದ್ದ ಮುತಾಲಿಕ್ ದೇಸಾಯಿ ಅವರು ಸ.ರಾ.ಸುರಕೂಡೆ ಅವರ ಸಾಹಿತ್ಯ ಕೃಷಿ ಶ್ಲಾಘನೀಯ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕೃತಿಕಾರ ಡಾ ಭಟ್ ಅವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಎಂ ಎ ದೇಸಾಯಿ ಪ್ರಾರ್ಥಿಸಿದರು. ಸಂಚಾಲಕರಾದ ಎಂ ವಾಯ್ ಮೆಣಸಿನಕಾಯಿ ಸ್ವಾಗತಿಸಿದರು. ಶಿವಾನಂದ ತಲ್ಲೂರ,ಸವದಿ, ಡಾ ಜಯಾನಂದ ಧನವಂತ, ಶಂಕರ್ ತಲ್ಲೂರ, ಶಿವಾನಂದ ನಾಯಕ, ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಬಿ ಬಿ ಮಠಪತಿ ವಂದಿಸಿದರು.ಶಿವಪ್ಪ ಕೌತಗಾರ ಹಾಜರಿದ್ದರು.