ಬೆಳಗಾವಿ-೦೯:ದಿನಾಂಕ ೦೬/೦೯/೨೦೨೪ ರಂದು ನಮ್ಮ ಕೆಎಲ್‌ಇ ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಜರಾಗಿದ್ದು, ಆಯಾ ವಿಷಯಗಳ ಉಪನ್ಯಾಸಕರ ಜೊತೆಗೆ ಮಾತನಾಡಿ ವಿಷಯಗಳ ಬಗ್ಗೆ ಇದ್ದ ಸಂದೇಹಗಳನ್ನು ಪರಿಹರಿಸಿಕೊಂಡರು. ಪಾಲಕರು ಮಹಾವಿದ್ಯಾಲಯದ ಶಿಸ್ತು, ಕಾಳಜಿ ಹಾಗೂ ಉಪನ್ಯಾಸಕರ ಬೋದನೆಗಳ ಬಗ್ಗೆ ಒಳ್ಳೆಯ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಚಾರ್ಯರನ್ನು ಭೆಟಿಯಾಗಿ ಪಾಲಕರು ಕೆಲವೊಂದು ಸಲಹೆಗಳನ್ನು ನೀಡಿದರು. ಈ ಸಲಹೆಗೆ ಪ್ರಾಚಾರ್ಯರು ಸಕಾರಾತ್ಮಕವಾಗಿ ಸ್ಪಂದಿಸಿದರು.