ಬೆಳಗಾವಿ-೦೬:ಕುಂದಾನಗರಿ ಬೆಳಗಾವಿ ಯಲ್ಲಿ ಗಣೇಶ ಚತುರ್ಥಿ ಖರೀದಿಗೆ ಮಾರುಕಟ್ಟೆಯಲ್ಲಿ(ಶಾಪಿಂಗ್) ಜನಸಾಗರವೇ ನೆರೆದಿತ್ತು.ಜನಸಂದಣಿಯಿಂದಾಗಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲಂಕಾರಿಕ ವಸ್ತುಗಳು, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದರು. ಐವತ್ತು ರೂಪಾಯಿಯಿಂದ ನಾನೂರು ರೂಪಾಯಿವರೆಗೆ ಐದು ಹಣ್ಣುಗಳು ಮಾರಾಟವಾಗುತ್ತಿದ್ದವು. ಕೃತಕ ಹೂವುಗಳು ಮತ್ತು ಹೂಮಾಲೆಗಳು ಅಲಂಕಾರಕ್ಕಾಗಿ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದವು.
ಬಹುವರ್ಣದ ಹೂವುಗಳು, ಆಕರ್ಷಕ ಹೂವಿನ ಮಾಲೆಗಳು, ಕಿರೀಟಗಳು, ಮುತ್ತಿನ ಸ್ತಂಭಗಳು, ವಿವಿಧ ಗೊಂಚಲುಗಳು, ಮಕರಗಳು, ಪೂಜಾ ಚೌರಂಗ, ವಿವಿಧ ರೀತಿಯ ದೀಪದ ಮಾಲೆಗಳು ಮಾರಾಟಕ್ಕೆ ಲಭ್ಯವಿವೆ. ದಿನವಿಡೀ ಜಿನುಗುತ್ತಿದ್ದರೂ ಜಿಟಿ ಜಿಟಿ ಮಳೆಯ ನಡುವೆಯೂ ಗಣೇಶೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ನಗರದ ಹಲವೆಡೆ ಮಂಟಪಗಳ ನಿರ್ಮಾಣ ಪೂರ್ಣಗೊಂಡಿದ್ದು, ವಿದ್ಯುತ್ ದೀಪಾಲಂಕಾರ, ಅಲಂಕಾರ ಕಾರ್ಯ ಆರಂಭವಾಗಿದೆ.