23/12/2024
IMG-20240906-WA0000

ಡಾ ಸುರೇಶ ನೆಗಳಗುಳಿ – ಚುಟುಕು ಚಿನ್ಮಯಿ ಪ್ರಶಸ್ತಿ ಪ್ರದಾನ

ದಿನಾಂಕ ೫ ರ ಸೆಪ್ಟೆಂಬರ ೨೪ ರಂದು ಕಟೀಲಿನ ದೇವಾಲಯದ ಎದುರಿನ ಸರಸ್ವತಿ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಏಳನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.

ಇದೇ ವೇದಿಕೆಯಲ್ಲಿ ಧರ್ಮಪ್ರಸಾದ ಪ್ರಶಸ್ತಿ ಪಡೆದ ಶ್ರೀಮಾನ್ ಕಟೀಲು ಹರಿನಾರಾಯಣ ಅಸ್ರಣ್ಣನವರು ದೀಪ ಬೆಳಗಿಸಿ ಉದ್ಘಾಟಿಸಿ ಚುಟುಕು ಸಾಹಿತ್ಯವು ಇಂದಿನ ಅವಸರದ ಯುಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಚಿಕ್ಕದರಲ್ಲೇ ಅನೇಕ ವಿಚಾರ ತಿಳಿಸುವ ಸಾಮರ್ಥ್ಯ ಇದ್ದಾಗಲೇ ಅದು ಅರ್ಥಗರ್ಭಿತವಾಗುತ್ತದೆ ಎಂದರು.

ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಚುಟುಕು ದಾಸೋಹ ಪ್ರಶಸ್ತಿ ಸ್ವೀಕರಿಸಿ ಶ್ರೀ ಹರಿಕೃಷ್ಣ ಪುನರೂರು ಮಾತನಾಡುತ್ತಾ ಚುಟುಕು ಸಾಹಿತ್ಯ ಗಾತ್ರದಲ್ಲಿ ಹಿರಿದು ಎನ್ನುತ್ತಾ ಈ ಶುಭ ಸಮಾರಂಭವು ಶಿಕ್ಷಕ ದಿನಾಚರಣೆಯ ಜೊತೆಗೇ ನಡೆಯುತ್ತಿರುವುದು ಪ್ರಶಂಸನೀಯ ಎಂದರು.

ಹಿರಿಯ ಶಿಕ್ಷಕ ಹೊಸಕೋಟೆ ಶ್ರೀಕಾಂತ್ ಕೆ.ವಿ ಯವರು ಸರ್ವಾಧ್ಯಕ್ಷರಾಗಿ ಚುಟುಕು ಸಾಹಿತ್ಯವು ಸರಕಾರದ ಸಹಕಾರಗಳನ್ನೂ ಪಡೆಯುವ ಅನಿವಾರ್ಯತೆ ಇದೆ ಎಂದರು.

ಪರಿಷತ್ತಿನ ಮುಖ್ಯಸ್ಥ ಕೃಷ್ಣ ಮೂರ್ತಿ ಕುಲಕರ್ಣಿ ಮತ್ತು ಜಯಾನಂದ ಪೆರಾಜೆ, ಪ್ರೊ ಜಿ.ಯು ನಾಯಕ ಉಪಸ್ಥಿತ ರಿದ್ದರು

ಇದೇ ವೇಳೆ ಮಂಗಳೂರಿನ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ , ವಿ.ಬಿ ಕುಳಮರ್ವ, ಮುನಿರಾಜ ರೆಂಜಾಳ, ರವೀಂದ್ರ ಶೆಟ್ಟಿ ಬಳಂಜ,ಜಯಾನಂದ ಪೆರಾಜೆ, ಶಾಂತಾ ಪುತ್ತೂರು , ವಿದ್ವಾನ್ ರಘುಪತಿ ಭಟ್ ಸಹಿತ ಹಲವರಿಗೆ “ಚುಟುಕು ಚಿನ್ಮಯಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿ‌.ಬಿ‌.ಕುಳಮರ್ವ ಅವರು ಸನ್ಮಾನಿತರ ಪರವಾಗಿ ಮಾತನಾಡುತ್ತಾ ಹಲವಾರು ತೆರನಾದ ಚುಟುಕು ಸಾಹಿತ್ಯಗಳ ಬಗೆಗೆ ಉಲ್ಲೇಖಿಸಿ ರಾಮಾಯಣ ಮಹಾಬಾರತವೂ ಸಹ ಚುಟುಕಿನಿಂದಲೇ ಉಗಮವಾದುವುಗಳು. ಚುಟುಕು ಗಾತ್ರ ವಾಮನ ಕಾರ್ಯ ತ್ರಿವಿಕ್ರಮ‌ ಎಂಬ ಹಾಗಿದೆ ಎಂದರು.

ಎನ್ ವಿ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ರಘುಪತಿ ಭಟ್ ಹಾಗೂ ಶಿಕ್ಷಕ ಸುರೇಶ್ ಕಟೀಲರು ಕ್ರಮವಾಗಿ ಹರಮುನಿದರೂ ಗುರುಮುನಿವನೇ ಹಾಗೂ ಕಟೀಲು ಕ್ಷೇತ್ರ ಪರಿಚಯಗಳನ್ಮು ವಿವರಿಸಿದರು.

ಡಾ ವಾಣಿಶ್ರೀ ಹಾಗೂ ಗುರುರಾಜ ಕಾಸರಗೋಡ್ ಸಾರಥ್ಯದ ಗಡಿನಾಡ ಸಾಂಸ್ಕೃತಿಕ‌ ಸಂಘದ ವತಿಯಿಂದ ನಡೆದ ವಿವಿಧ ರೀತಿಯ ನೃತ್ಯ ವೈಭವ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನರಂಜಿಸಿದುವು

ಸ್ಥಳೀಯ ಕಟೀಲು ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಡಾ ಸುರೇಶ ನೆಗಳಗುಳಿಯವರ ಅಧ್ಯಕ್ಷತೆಯಲ್ಲಿ ಜಯಾನಂದ ಪೆರಾಜೆ ನಿರೂಪಣೆಯಲ್ಲಿ ಕವಿಗೋಷ್ಠಿ ಸಂಪನ್ನವಾಯಿತು.

ರಟ್ಟೇಹಳ್ಳಿ ಶೇಖರ‌ ಗೌಡರ ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಜಯಾನಂದ ಪೆರಾಜೆಯವರ ಆಶಯ ನುಡಿ ಸಹಿತ ಡಾ ವಾಣಶ್ರೀ,ಪ್ರೇಮಾ ಬಿರಾದಾರ,ಗುರುರಾಜ ಕಾಸರಗೋಡು,ಪ್ರೇಮಾ ಆರ್ ಶೆಟ್ಟಿ, ಜಯಶ್ರೀ ಶೆಣೈ,ಸೂರ್ಯನಾರಾಯಣ ಸೈಪಂಗಲ್ಲು, ಜಯರಾಮ‌ ಮಾಣಿ, ರವೀಂದ್ರ ಕುಕ್ಕಾಜೆ, ಬಾವುಟ ಬಸವರಾಜ್, ಹೇಮಾವತಿ ಸಾಲೆತ್ತೂರು, ಪ್ರೇಮಲತಾ ಮಂಚಿ, ತುಳಸಿ ಕೈರಂಗಳ, ಶ್ವೇತಾ ಡಿಬಡಗ ಬೆಳ್ಳೂರು, ಲಕ್ಷ್ಮೀ ಕಿಲೆಂಜಾರ ಮುಂತಾದವರು ಭಾಗವಹಿಸದರು ರವೀಂದ್ರ ಕುಕ್ಕಾಜೆ ನಿರೂಪಿಸಿದರು. ಎಲ್ಲ‌ಕವಿಗಳನ್ನೂ ಹಾರ ಶಾಲು ಸಹಿತ ಗೌರವಿಸಲಾಯಿತು.

ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿಯವರನ್ನು ದ.ಕ ಜಿಲ್ಲಾ ಸಮಿತಿಯ ಸದಸ್ಯರು ಪೇಟ ಹಾರ ಹಾಕಿ ಸನ್ಮಾನ ಮಾಡಿದ ನಂತರ ಡಾ ಸುರೇಶ ನೆಗಳಗುಳಿಯವರು ಸಮಾರೋಪ ಭಾಷಣ ಮಾಡುತ್ತಾ ಚುಟುಕಿನಿಂದಲೇ ಸಾಹಿತ್ಯವು ಉಗಮವಾಗಿತ್ತು. ಪ್ರತಿಯೊಬ್ಬನೂ ಭಾವನಾತ್ಮಕವಾಗಿ ಸಾಹಿತಿಯೇ ಆಗಿರುತ್ತಾನೆ ಅದಕ್ಕೊಂದು ಚೌಕಟ್ಟು ಕೊಟ್ಟಸಗ ಕಾವ್ಯವಾಗುತ್ತದೆ ಎಂದರು.. ಮುಕ್ತಕ ರೂಪೀ ಆದಿಪ್ರಾಸಯುಕ್ತ ಗಜಲ್ ವಾಚಿಸಿ ಅದರೊಳಗೆ ಶಾಯರಿಯೂ ಇದೆ ಚುಟುಕೂ ಇದೆ ರುಬಾಯಿಯೂ ಇದೆ ಮುಕ್ತಕವೂ ಇದೆ ಗಜಲ್ ಹಾಗೂ ಕಾವ್ಯವೂ ಇದೆ ಎಂದು
ಸೋದಾಹರಣವಾಗಿ ವಿವರಿಸಿದರು.

ರಾಜು ಎನ್ ಆಚಾರ್ಯ ಠರಾವು ಮಂಡಿಸಿದರು.ಜಿ.ಯು ನಾಯಕ ಅನುಮೋದಿಸಿದರು.

ಅಪೂರ್ವಾ ಕಾರಂತ್ , ರೇಖಾ ಸುದೇಶ್ ರಾವ್ ,ಹಾಗೂ ರವೀಂದ್ರ ಅವರು ನಿರೂಪಣೆಯಲ್ಲಿ ಸಹಕರಿಸಿದ್ದರು.

 

error: Content is protected !!