23/12/2024
IMG-20240904-WA0004

ಬೆಳಗಾವಿ-೦೪: ಬಯಲಾಟ ಕಲಾವಿದರನ್ನು ಉತ್ತೇಜಿಸವ ಉದ್ದೇಶದಿಂದ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ನಾಳೆ ಗುರುವಾರ ಸೆ.೫ ರಿಂದ ೬ ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸಣ್ಣಾಟಗಳ ಸಮ್ಮೇಳನವನ್ನು ಆಯೋಜಿಸಲಾಗಿದ್ದು. ೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕರ್ನಾಟಕ ರಂಗಭೂಮಿ ತಜ್ಞರು ಹಾಗೂ ವಿದ್ವಾಂಸರಾದ ಡಾ.ವೀರಣ್ಣ ರಾಜೂರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ಕೆ.ಆರ್.ದುರ್ಗಾದಾಸ್ ಅವರು ಹೇಳಿದರು.ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಮಂಗಳವಾರ ನಡೆದ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿದರು.ರಾಧಾನಾಟ, ಸಂಗ್ಯಾ-ಬಾಳ್ಯಾ, ಬಲವಂತ, ಶರಣರ ಆಟ, ಮುಂತಾದ ಆಟಗಳು ಜನಮನವನ್ನು ತಣ್ಣಿಸುತ್ತವೆ. ಪುರಾಣ, ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳನ್ನು ಆಧಾರಿಸಿದ ಸಣ್ಣಾಟಗಳು ಬೆಳಗಾವಿ ಜಿಲ್ಲೆಯ ಹಳ್ಳಿ-ಹಳ್ಳಿಗಳಲ್ಲಿ ಮನೆ ಮಾತಾಗಿವೆ. ಸಣ್ಣಾಟಗಳನ್ನು ಪ್ರದರ್ಶನ ಮಾಡುವ ಕಲಾತಂಡಗಳು ಪ್ರೋತ್ಸಾಹಿಸಲು ಸಮ್ಮೆಳವನ್ನು ಹಮ್ಮಿಕೊಂಡಿದ್ದು, ಹುಕ್ಕೇರಿ, ಗೋಕಾಕ ಹಾಗೂ ಚಿಕ್ಕೋಡಿ ಸೇರಿ ಸಣ್ಣಾಟ ಐದು ಕಲಾ ತಂಡಗಳು ಸಮ್ಮೆಳದಲ್ಲಿ ಪ್ರದರ್ಶನ ನೀಡಲಿದ್ದು, ಸುಮಾರು ೫೦ ಸಣ್ಣಾಟ ತಂಡಗಳು ಹಾಗೂ ೫೦ ಜನ ಕಲಾವಿದರು ಹಾಡುಗಾರಿಕೆ ಪ್ರದರ್ಶನ ನೀಡುವರು ಎಂದರು.ಡಾ.ರಾಮಕೃಷ್ಣ ಮರಾಠೆ, ಡಾ.ಗುರುಪಾದ ಮರಿಗುದ್ದಿ, ಡಾ.ರಾಜಶೇಖರ್ ಇಚ್ಚಂಗಿ, ಡಾ.ಆರ್.ಎಫ್.ಬಾಳಪ್ಪನವರ, ಡಾ.ಸಿ.ಕೆ.ನಾವಲಗಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ಮಾಡುವರು.ಬಯಲಾಟ ಅಕಾಡೆಮಿಯ ಸದಸ್ಯರಾದ ಭೀಮಪ್ಪ ಹುದ್ದಾರ ಹಾಗೂ ಮಲ್ಲಮ್ಮ ಮಾದರ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸುವರು ಎಂದು ಅಕಾಡೆಮಿಯ ಅಧ್ಯಕ್ಷರಾದ ಡಾ.ಕೆ.ಆರ್.ದುರ್ಗಾದಾಸ್ ವಿವರಿಸಿದ್ದರು. ಈ ವೇಳೆ ಕರ್ನಾಟಕ ಬಯಲಾಟ ಅಕಾಡೆಮಿಯ ರಿಜಿಸ್ಟಾçರ್ ಕರ್ಣಕುಮಾರ ಮತ್ತು ಅಕಾಡೆಮಿಯ ಸದಸ್ಯೆ ಸಂಚಾಲಕರಾದ ಬೀಮಪ್ಪ ಹುದ್ದಾರ ಅವರು ಹಾಜರಿದ್ದರು.

error: Content is protected !!