23/12/2024
IMG 20240828 WA0003 1 -

ಬೆಳಗಾವಿ-೨೮: ಬೆಳಗಾವಿ ತಾಲೂಕಿನ ಪಾವನಕ್ಷೇತ್ರ ಬಡೆಕೊಳ್ಳಮಠದಲ್ಲಿ ಪ್ರತಿ ವರ್ಷದಂತೆ ಪವಾಡ ಪುರುಷ ಶ್ರೀ ನಾಗೇಂದ್ರ ಮಹಾಸ್ವಾಮಿಗಳ ಶ್ರಾವಣ ಮಾಸ ಜಾತ್ರಾ ಮಹೋತ್ಸವ ನಡೆಯಲ್ಲಿದೆ.

ಜಾತ್ರಾ ಮಹೋತ್ಸವ ಸೆಪ್ಟೆಂಬರ್ 01 2024 ರಂದು ಪಾಲಿಕೆ ಬರಮಾಡಿಕೊಳ್ಳುವುದು, ಸೆಪ್ಟೆಂಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ಮಹಾರುದ್ರಾಭಿಷೇಕ, ನಂತರ 11 ಗಂಟೆಗೆ ಶ್ರೀಗಳವರ ಪಾದಪೂಜೆ, 11 30 ಕ್ಕೆ ಅಡ್ಡ ಪಲ್ಲಕ್ಕಿ ಉತ್ಸವ,12 30 ಕ್ಕೆ ರಥೋತ್ಸವ, 2 ಗಂಟೆಗೆ ಮಹಾಪ್ರಸಾದ ನೆರವೇರಲಿದ್ದು, 4 ಗಂಟೆಗೆ ಪಾಲಕಿ ಬೀಳ್ಕೊಡುವ ಸಮಾರಂಭ ಮಾಡಲಾಗುವುದು.

ಪ್ರಸ್ತುತ ಪೀಠಾಧಿಕಾರಿಗಳಾದ ಪರಮಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಭಕ್ತಾದಿಗಳು ತನು ಮನ ಧನದಿಂದ ಸೇವೆ ಸಲ್ಲಿಸಿ ಅಜ್ಜನವರ ದರ್ಶನ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9379788855 ಗೆ ಸಂಪರ್ಕಿಸಿ.

error: Content is protected !!