ಬೆಳಗಾವಿ-೨೬: ಅಬಾ ಕ್ಲಬ್ ಹಾಗೂ ಹಿಂದ್ ಸೋಶಿಯಲ್ ಕ್ಲಬ್ ಸಹಯೋಗದಲ್ಲಿ ಮರಾಠಾ ಯುವಕ ಸಂಘದ ವತಿಯಿಂದ ನಡೆದ 19ನೇ ಅಂತರ್ ರಾಜ್ಯ ಅಂತರ್ ಶಾಲಾ ಈಜು ಸ್ಪರ್ಧೆಯ ಬಹುಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸುಹಾಸ್ ಕಿಲ್ಲೇಕರ ಸ್ವಾಗತಿಸಿದರು. ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದ ಮರಾಠಾ ಯುವ ಸಂಘದ ಅಧ್ಯಕ್ಷ ಬಾಬಾಸಾಹೇಬ ಕಾಕತ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 58 ವರ್ಷಗಳಿಂದ ಬೆಳಗಾವಿಯಲ್ಲಿ ಮರಾಠಾ ಯುವ ಸಂಘ ಸಂಘಟಿಸುತ್ತಿದ್ದು, ಕೋಟೆ ಕೆರೆಯಲ್ಲಿನ ಕೆಸರಿನ ನೀರಿನಿಂದಾಗಿ ಸ್ಪರ್ಧೆಗಳನ್ನು ನಿಲ್ಲಿಸಿ ಈಗ ಕಳೆದ 18 ವರ್ಷಗಳಿಂದ ನಗರದ ಈಜುಕೊಳದಲ್ಲಿ ನಡೆಸಲಾಗುತ್ತಿದೆ.
ಮಹಾಂತೇಶ ಕವಟಗಿಮಠ ಅವರು ಮರಾಠಾ ಯುವ ತಂಡ ಹಾಗೂ ಅಬಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಎಲ್ಲಾ ಈಜು ತಂಡಗಳನ್ನು ಅಭಿನಂದಿಸಿದರು. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಿಂದ 300 ರಿಂದ 400 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಜತೆಗೆ ಬೆಳಗಾವಿ ನಗರ ಕ್ರೀಡಾ ನಗರಿಯಾಗುತ್ತಿದೆ ಎಂದರು.
ಸ್ಪರ್ಧೆಯಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಬಹುಮಾನ ವಿತರಣೆಯನ್ನು ಶೇಖರ ಹಂದೆ, ಸುಹಾಸ ಕಿಲ್ಲೇಕರ, ಪಾಂಡುರಂಗ ಜಾಧವ, ದಿನಕರ ಘೋರ್ಪಡೆ, ಮಧು ಪಾಟೀಲ್, ವಿಜಯ ಬೊಂಗಾಳೆ, ಮಾರುತಿ ದೇವಗೇಕರ ಮಾಡಿದರು.
ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹಾಗೂ ಬಾಳಾಸಾಹೇಬ ಕಾಕತ್ಕರ್ ಅವರು ಜನರಲ್ ಚಾಂಪಿಯನ್ ಷಿಪ್ ಕಪ್ ಅನ್ನು ಸೇಂಟ್ ಪಾಲ್ಸ್ ಪ್ರೌಢಶಾಲೆಗೆ ಬಾಲಕರ ಹಾಗೂ ಸೇಂಟ್ ಜೋಸೆಫರ ಪ್ರೌಢಶಾಲೆಗೆ ಬಾಲಕಿಯರ ಪುರಸ್ಕಾರ ನೀಡಿ ಗೌರವಿಸಿದರು.
ಸ್ಪರ್ಧೆಯನ್ನು ಅಬಾ ಕ್ಲಬ್‌ನ ವಿಶ್ವಾಸ ಪವಾರ ನಿರ್ವಹಿಸಿದರು ಮತ್ತು ಶೇಖರ ಹಂದೆ ವಂದಿಸಿದರು.