29/01/2026
IMG-20240824-WA0001

ಬೆಳಗಾವಿ-೨೪: ನಾವು ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಹಸುರಿನ ಸಂರಕ್ಷಿಸಬೇಕಾದ ತುರ್ತಿನ ಸಂಗತಿಯಾಗಿದೆ. ಕುಟುಂಬ, ನೆರೆಹೊರೆ, ಸ್ನೇಹಿತರಲ್ಲಿ ಈ ವಿಚಾರ ವಿನಿಮಯಗೊಂಡು ಕಾರ್ಯರೂಪಕ್ಕೆ ಬರಬೇಕಿದೆ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.
ಶನಿವಾರ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ರಿಗಿಡದ ಸಸಿ ನೆಟ್ಟು ಪರಿಸರ ಜಾಗೃತಿ ‌ಮೂಡಿಸಿ ಮಾತನಾಡಿದರು.ಪರಿಸರ ನಾಶದಿಂದ ಪರಿಸರದಲ್ಲಿ ಏರು ಪೇರು ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಆದ್ದರಿಂದ ಇನ್ನಾದರು ನಾವು ಪರಿಸರ ರಕ್ಷಣೆ ಬಗ್ಗೆ ಜಾಗೃತರಾಗೋಣ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸೋಣ. ಎಲ್ಲರೂ ಪರಿಸರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಕತಿ ಸಿಪಿಐ ಉಮೇಶ ಎಂ, ಪಿಎಸ್ಐ ಮೃತ್ಯುಂಜಯ ಮಠದ, ಮಂಜುನಾಥ ಹುಲಕುಂದ, ಪ್ರಕಾಶ ಬಲಾಲ, ಅನಿಲ್ ಪಾವಸೆ, ಬಾಳು ಮೇಸ್ತ್ರಿ, ಬಾಳು ಕಣಬರಕ, ಜೈರಾಮ ಪಾಟೀಲ್ ಹಾಗೂ ಕಂಗ್ರಾಳಿ ಗಣೇಶ ಮಂಡಳದ ಸದಸ್ಯರು ಹಾಜರಿದ್ದರು.

error: Content is protected !!