ಬೆಂಗಳೂರು-೨೩: ತಮ್ಮ ರಾಜಕೀಯ ಪ್ರವೇಶಕ್ಕೆ ಪ್ರೇರಕರಾದ ಮಾಜಿ ರಾಜ್ಯಪಾಲರು ಹಾಗೂ ಕೇಂದ್ರದ ಮಾಜಿ ಸಚಿವರು ಆದ ಮಾರ್ಗರೇಟ್ ಆಳ್ವ ಅವರನ್ನು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯ
ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿದರು.
ತಮ್ಮ ರಾಜಕೀಯ ಮಾರ್ಗದರ್ಶಕರೂ ಆಗಿರುವ ಮಾರ್ಗರೆಟ್ ಆಳ್ವಾ ಜೊತೆ ಕೆಲಕಾಲ ಚರ್ಚಿಸಿದ ಸಚಿವರು, ಹಿಂದಿನ ರಾಜಕೀಯ ಘಟನೆಗಳ ಮೆಲುಕು ಹಾಕಿದರು.
ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿ, ಚರ್ಚಿಸಿದರು.
ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಆಳ್ವಾ ಕೆಲವು ಸಲಹೆ ನೀಡಿದರು.