ಬೆಳಗಾವಿ-೨೧: ಬೆಳಗಾವಿಯ ಖ್ಯಾತ ಯೋಗ ಈಜು ಪಟು ಹಾಗೂ ಆಕ್ವಾ ಡಾಲ್ಫಿನ್ ಗ್ರೂಪ್ ನ ಅಧ್ಯಕ್ಷ ಸುಹಾಸ್ ನಿಂಬಾಳ್ಕರ್ ಅವರನ್ನು ಸನ್ಮಾನಿಸಲಾಯಿತು.
ಅವರ ನೀರಿನ ಯೋಗವನ್ನು ಪರ್ಫೆಕ್ಟ್ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂದಿ ಹಾಗೂ ಬೆಳಗಾವಿ ಮಹಾಪೌರರಾದ ಸವಿತಾ ಕಾಂಬಳೆ ಅವರು ಸುಹಾಸ ನಿಂಬಾಳ್ಕರ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪ ಮೇಯರ್ ಆನಂದ್ ಚವ್ಹಾಣ, ಕಾರ್ಪೊರೇಟರ್ ಜಯಂತ್ ಜಾಧವ್, ಗಿರೀಶ್ ಧೋಂಗಡಿ, ನಿತಿನ್ ಜಾಧವ್, ವಿನಾಯಕ ಅರ್ಕಸಾಲಿ ಮತ್ತಿತರರು ಉಪಸ್ಥಿತರಿದ್ದರು.