ಬೆಳಗಾವಿ-೧೮: ಸೋಮವಾರ ನಾಳೆ ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನ ಹಬ್ಬ. ಬೆಳಗಾವಿಯ ಮಾರುಕಟ್ಟೆಯಲ್ಲಿ ಖರೀದಾರಿಗಾಗಿ ಸಹೋದರಿಯರು ಲಗ್ಗೆ ಇಡುತ್ತಿದ್ದು, ಬೆಳಗಾವಿಗರ ಗಮನಸೆಳೆಯುತ್ತಿವೆ ಬಣ್ಣ ಬಣ್ಣದ ರಾಖಿಗಳು.
ಬಣ್ಣ ಬಣ್ಣದ ರಾಕಿಗಳು…ಚಿಣ್ಣರನ್ನು ಆಕರ್ಷಿಸುತ್ತಿವೆ ಚೆಂದ ಚೆಂದದ ವೈರೈಟಿಗಳು. ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನದ ಹಬ್ಬ ನಾಳೆ ದೇಶಾದ್ಯಂತ ಆಚರಣೆಗೊಳ್ಳುತ್ತಿದೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ರಾಕಿ ಮಾರಾಟ ಕೂಡ ಜೋರಾಗಿದೆ. ಇನ್ನು ಡೋರೆಮೋನ್, ಛೋಟಾಭೀಮ್, ರಬ್ಬರ್, ಲೈಟಿಂಗ್ ಮುಂತಾದ ಆಕರ್ಷಕ ರಾಕಿಗಳು ಚಿಣ್ಣರ ಆಕರ್ಷಣೆಯಾಗಿವೆ.
ನಗರದ ಪ್ರಮುಖ ಮಾರುಕಟ್ಟೆಗಳಾದ ಗಣಪತ ಗಲ್ಲಿ, ಪಾಂಗುಳ ಗಲ್ಲಿ, ಮಾರುತಿ ಗಲ್ಲಿಗಳಲ್ಲಿನ ಅಂಗಡಿಗಳಲ್ಲಿ ಬಣ್ಣಬಣ್ಣದ ರಾಖಿಗಳು ಸಹೋದರಿಯರನ್ನು ಆಕರ್ಷಿಸುತ್ತಿವೆ. ಕಾಟನ್, ಸಿಲ್ವರ್ ಮೇಟಲ್, ಕುಂದನ್, ಸ್ಟೋನ್, ಹ್ಯಾಂಡಮೇಡ್ ಇನ್ನುಳಿದ ಪ್ರಕಾರದ ರಾಕಿಗಳು ರೂಪಾಯಿ 1 ರಿಂದ 150ರ ವರೆಗೆ ಮಾರಾಟ ಕ್ಕಿವೆ.