23/12/2024
IMG-20240816-WA0036

ಕೌಜಲಗಿ-೧೬ : ಒಡೆದು ಆಳುವ ನೀತಿ ಅಪಾಯಕಾರಿಯಾಗಿದ್ದು, ಇಂಥ ಗುಣಗಳನ್ನು ಕಲಿತುಕೊಳ್ಳುವುದಕ್ಕಿಂತ ಎಲ್ಲರೂ ಒಂದು ಎಂಬ ಭಾವನೆಯ ಏಕತೆಯ ಗುಣವನ್ನು ಬೆಳೆಸಿಕೊಳ್ಳಬೇಕೆಂದು ವೈದ್ಯ ಡಾ. ಶಿವಾನಂದ ಪಾಟೀಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಸಿಂಧು ತಾಯಿ -ಮಾಧವರಾವ ದಳವಾಯಿ ಎಜುಕೇಶನ್ ಟ್ರಸ್ಟ್ ನ ಪ್ರಾಥಮಿಕ ಮತ್ತು ಡಾ. ಎಂ ಎಂ ದಳವಾಯಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜರುಗಿದ 78ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಹಿತಿ- ಪತ್ರಕರ್ತ ಡಾ. ರಾಜು ಕಂಬಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆದುದಕ್ಕೆ ಒಂದು ಭವ್ಯವಾದ ಇತಿಹಾಸವಿದೆ. ಇಂದಿನ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಇತಿಹಾಸವನ್ನು ಅರಿಯಬೇಕು. ಭಾವಿ ಪ್ರಜೆಗಳಾಗುವ ನೀವು ದೇಶ, ನಾಡು, ಹುಟ್ಟಿದ ಊರಿನ ಬಗ್ಗೆ ಅಭಿಮಾನದ ಇತಿಹಾಸ ಬರೆಯಬೇಕಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷವಾದರೂ ಸಾಧಿಸಬೇಕಾದುದು ತುಂಬಾ ಇದೆ. ಹಾಗೆ ನಮ್ಮ ನಮ್ಮ ಹುಟ್ಟೂರುಗಳ ಅಭಿವೃದ್ಧಿಯ ಸಾಧನೆಗಾಗಿ ವಿದ್ಯಾರ್ಥಿಗಳು ಛಲ ತೊಟ್ಟಾಗ ಮಾತ್ರ, ಗ್ರಾಮ ರಾಜ್ಯ – ಭವ್ಯ ರಾಜ್ಯವಾಗಲು ಸಾಧ್ಯವಾಗುತ್ತದೆಂದು ಹೇಳಿದರು.
ಅಧ್ಯಕ್ಷತೆಯನ್ನು ಉಪ ಮುಖ್ಯೋಪಾಧ್ಯಾಯ ಎಸ್ ಎಸ್ ಖಟಕಬಾವಿ ವಹಿಸಿದ್ದರು.
ವಿವಿಧ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಭಾಷಣ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ, ದಸ್ತಗಿರಸಾಬ ಡಬರಲಿ, ದೊಡ್ಡ ಸಿದ್ದಪ್ಪ ಖಾನಟ್ಟಿ, ವಸಂತ ಹಾದಿಮನಿ, ಮೀರಾಸಾಬ ಸಾಬ್ ಅನ್ಸಾರಿ, ನೂರ ಅಹಮದ್ ಇನಾಮ್ದಾರ, ಶಶಿಕಲಾ ಹಾದಿಮನಿ, ಎಲ್. ಎಚ್. ಕೌಜಲಗಿ, ವಿ.ಕೆ. ಬಂಡಿವಡ್ಡರ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!