ಚಾಮರಾಜನಗರ-೧೬:ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಇರಬೇಕು. ನಮ್ಮದೇಶ ನಮ್ಮ ಭಾಷೆ, ನಾಡು ಎನ್ನುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮ ಚಂದ್ರ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಆಚರಣೆ ಕಾಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಹಾಗೂ ಮಹಾತ್ಮ ಗಾಂಧಿಜೀ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಅವರು ಮಾತನಾಡಿದರು. ನಮ್ಮ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಗಳಲ್ಲಿಯು ನಮ್ಮ ದೇಶ ಸಾಧನೆಯನ್ನು ಮಾಡುತ್ತಿದ್ದೆ. ಡಾ. ಬಿ.ಆರ್. ಅಂಬೇಡ್ಕರ್ ರವರ ಮಾರ್ಗದಲ್ಲಿ ವಿದ್ಯಾಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ನಿಮ್ಮನ್ನು ಎತ್ತರಕ್ಕೆ ಕರೆದ್ಯೊಯುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ, ಎಂ. ರುದ್ರಮೂರ್ತಿ ರವರು ಮಾತನಾಡಿ ನಮ್ಮ ದೇಶ ಸಂಪತ್ತು ಭರಿತವಾದ ದೇಶ ನಮ್ಮ ದೇಶದ ಮೇಲೆ ಬ್ರೀಟಿಷರು ದಾಳಿ ನಡೆಸಿ ಎಲ್ಲವನ್ನು ದಾಳಿಮಾಡಿದ್ದಾರೆ.
ನಮ್ಮ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಣ ತ್ಯಾಗವನ್ನು ಮಾಡಿರುವ ಬಹಳಷ್ಟು ಮಂದಿ ಇದ್ದಾರೆ. ದೇಶದ್ಯಾಂತ ಸ್ವಾತಂತ್ರ್ಯದಿನವನ್ನು ಆಚರಣೆ ಮಾಡಲಾಗುತ್ತಿದೆ. ನಮ್ಮದೇಶ ಹಬ್ಬಗಳ ದೇಶ ವರ್ಷದ ೩೬೫ ದಿನಗಳು ಹಬ್ಬದ ಆಚರಣೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲಿ ನಮಗೆ ಆಗಸ್ಟ್ ೧೫ ರಂದು ಬರುವ ಸ್ವಾತಂತ್ರ್ಯ ಹಬ್ಬ ವು ಬಹಳ ದೊಡ್ಡ ಹಬ್ಬವಾಗಿದೆ ಈ ಹಬ್ಬವನ್ನು ದೇಶದ ಮೂಲೆ ಮೂಲೆಗಳ್ಲಿ ಆಚರಣೆ ಮಾಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರತ್ನಮ್ಮ , ದೈಹಿಕ ಶಿಕ್ಷಕರಾದ ರಂಗಸ್ವಾಮಿ, ಕುಮಾರ್, ಎಸ್.ಮಹೇಶ್, ಯಶ್ ಪಾಲ್ ಡಿ.ಎಸ್, ಮಂಜುಳಾ. ನಾಗರಾಜು, ಪರಶಿವಮೂರ್ತಿ ಉಪಸ್ಥಿತಿರಿದ್ದರು.