ಬೈಲಹೊಂಗಲ-೧೪:ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಉನ್ನತ ಮಟ್ಟದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಡಿಜಿಟಲ್ ಶಿಕ್ಷಣ, ಒಳ್ಳೆಯ ಸರ್ಕಾರಿ ಶಾಲಾ, ಕಾಲೇಜು ಕಟ್ಟಡಗಳು, ಶಿಕ್ಷಣ ತಂತ್ರಜ್ಞಾನ, ಕಾರ್ಯಕ್ರಮ ವೇದಿಕೆ, ಕ್ರೀಡಾಂಗಣ, ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದು ಇದರ ಸದುಪಯೋಗ ನಾವು ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಯುವ ಮುಖಂಡ ಸಚಿನ ಪಾಟೀಲ ಹೇಳಿದರು.
ಅವರು ತಾಲೂಕಿನ ನೇಸರಗಿ ಗ್ರಾಮದ ದೇವರಕೊಂಡ ಅಜ್ಜನ ಗುಡಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಹತ್ತಿರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಮತ್ತು ಅಂಗನವಾಡಿ ಕೇಂದ್ರದ ಅನುದಾನದಲ್ಲಿ 24 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಅಂಗನವಾಡಿ ಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಗುದ್ದಲಿ ಪೂಜೆ ನೆರವೇರಿಸುವದರ ಮುಖಾಂತರ ಗ್ರಾಮ ಪಂಚಾಯತ್ ಅಧ್ಯಕ್ಷ ನಿಂಗಪ್ಪ ಮಾಳನ್ನವರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ ಮುಖಂಡರಾದ
ಮಲ್ಲಿಕಾರ್ಜುನ ಕಲ್ಲೋಳಿ,ಮಂಜುನಾಥ ಹುಲಮನಿ,ಶಿವಾನಂದ ಮೆಟ್ಯಾಳ, ನಜೀರ್ ತಹಶೀಲ್ದಾರ್,ಗುತ್ತಿಗೆದಾರ ಗಂಗಪ್ಪ ದಾನಪ್ಪನವರ, ಭಾಷಾ ಬೇಪಾರಿ,ಅಂಗನವಾಡಿ ಶಿಕ್ಷಕರು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.