23/12/2024
ನಾಗಪ್ಪ ರಾಮಚಂದ್ರ ವಿಸಾಳೆ  ಪ್ರತಿಷ್ಠಾನ, ಮಾರಿಹಾಳ ವತಿಯಿಂದ ಜೀವನ ಗೌರವ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
   ಬೆಳಗಾವಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2024 -25 ನೇ ಸಾಲಿನ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ನಿವೃತ್ತಿ ಹೊಂದಿದ  ಹಿರಿಯ ಶಿಕ್ಷಕರಿಗೆ ಜೀವನ ಗೌರವ ಪ್ರಶಸ್ತಿ   ಹಾಗೂ      ವಿವಿಧ ಕಲಾ, ಕ್ರೀಡಾ ಪ್ರಕಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ  ಪ್ರಾಥಮಿಕ ವಿದ್ಯಾರ್ಥಿಗಳಿಗೆ ಕೊಡ ಮಾಡುವ  ವಿಶೇಷ ಪ್ರಶಸ್ತಿಗಳಿಗಾಗಿ ನಾಗಪ್ಪ ರಾಮಚಂದ್ರ ಮಿಸಾಳೆ ಪ್ರತಿಷ್ಠಾನ ಮಾರಿಹಾಳ ಇವರ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.  ಶಾಲಾ ಶಿಕ್ಷಕರು ಕನಿಷ್ಠ 20 ವರ್ಷಗಳ ಅನುಭವ  ಹೊಂದಿರಬೇಕು. ನಿವೃತ್ತ ಶಿಕ್ಷಕರು ಕನಿಷ್ಠ 75 ವಯಸ್ಸು ದಾಟಿರಬೇಕು. ಅರ್ಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಸ್ವ ವಿವರ ಹಾಗೂ ಸಾಧನೆಗಳ ದಾಖಲೆಗಳೊಂದಿಗೆ ಅರ್ಜಿಗಳನ್ನು ಡಾ ಡಿ ಎನ್ ಮಿಸಾಳೆ ಪ್ಲಾಟ್  ನಂಬರ್ 19, ಪಿ ಅಂಡ್ ಟಿ  ಕಾಲೋನಿ, ಹನುಮಾನ್ ನಗರ್ 2ನೇ ಹಂತ ಬೆಳಗಾವಿ 590019 ಇವರಿಗೆ ದಿನಾಂಕ್ 31- 8 -2024 ರ ಒಳಗೆ  ತಲುಪುವಂತೆ ಪೋಸ್ಟ್  ಮೂಲಕ ಕಳುಹಿಸಬೇಕು. ಪುರಸ್ಕಾರರೂಪದಲ್ಲಿ  ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು   ಪ್ರಮಾಣ ಪತ್ರಗಳನ್ನು ಪ್ರಧಾನ  ಮಾಡಲಾಗುವುದು. .
ಪ್ರಶಸ್ತಿ ಪ್ರಧಾನ ಸಮಾರಂಭವು ಸೋಮವಾರ ದಿನಾಂಕ 16 -9- 2024 ರಂದು  ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಮರಾಠ ಸಂಸ್ಕೃತಿಕ ಭವನ, ವಿನಾಯಕ ನಗರ ಇಲ್ಲಿ ಮುಂಜಾನೆ 10 ಗಂಟೆಗೆ ನೆರವೇರುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 948039 8025,  ಅಥವಾ 9448691484 ಸಂಪರ್ಕಿಸಬಹುದು.
error: Content is protected !!