ಬೆಳಗಾವಿಯ ಸ್ನೇಹಮ್ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತ ಪಟ್ಟ ಕಾರ್ಮಿಕ ಯುವಕನ ಅವಲಂಬಿತ ಕುಟುಂಬಕ್ಕೆ ಶಾಶ್ವತ ಪರಿಹಾರ ಕೊಡುವಂತೆ ಮತ್ತು ಅಗ್ನಿ ಅವಘಡದಲ್ಲಿ ಫಾರಾದ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೂ ನ್ಯಾಯಯುತವಾದ ಪರಿಹಾರ ನೀಡುವಂತೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯಿಂದ ಬೆಳಗಾವಿಯ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಂಘಟನೆಯ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗೀಹಳ್ಳಿ ಮನವಿ ಮಾಡಿದರು ಜೊತೆಗೆ ಮತ್ತೆಂದೂ ಇಂತಹ ಅವಘಡಗಳು ಸಂಭವಿಸದಂತೆ ಎಲ್ಲ ಕಾರ್ಖಾನೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಕಾರ್ಮಿಕ ಅಧಿಕಾರಿಗಳು ಎಲ್ಲ ಕಾರ್ಖಾನೆಗಳಿಗೆ ತಿಳಿಸಬೇಕು ಹಾಗೆ ಎಲ್ಲ ಕಾರ್ಖಾನೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಕಾರ್ಮಿಕರಿಗೆ ಸುರಕ್ಷಿತ ಉತ್ತಮ ಗುಣಮಟ್ಟದ ಸಲಕರಣೆಗಳನ್ನು ನೀಡಬೇಕು ಎಂದು ಸೂಚಿಸಲಾಯಿತು . ಸ್ನೇಹಮ್ ಕಾರ್ಖಾನೆಯಲ್ಲಿ ಮೃತ ಪಟ್ಟ ಕುಟುಂಬಸ್ಥರಿಗೆ ಹಾಗೂ ಗಾಯಾಳುಗಳಿಗೆ ನ್ಯಾಯ ಸಿಗದೆ ಹೋದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು .
ಈ ಸಂದರ್ಭದಲ್ಲಿ ಸಂಘಟನೆಯ ಬೆಳಗಾವಿಯ ತಾಲೂಕು ಉಪಾಧ್ಯಕ್ಷರು ಶಕ್ತಿಕುಮಾರ ಪೀ ಎಸ್
ಭರಮಣ್ಣ ಕೊಣಕೇರಿ,ಬೆಳಗಾವಿ ಗ್ರಾಮೀಣ ಸಹ ಕಾರ್ಯದರ್ಶಿ
ನಿಂಗರಾಜು ದಡ್ಡಿಮಣಿ
ಸಂದೀಪ ನರಸಗೌಡ
ಬಸಪ್ಪ ಧೂಳಪ್ಪಗೊಳ್
ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತಿದ್ದರು.