ಬೆಳಗಾವಿ-06; ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೇಝೇಶನ ಬೆಳಗಾವಿ ವಿಭಾಗದ ವತಿಯಿಂದ ಕಳೆದ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಈ ವರ್ಷವೂ ಸಹ ಆಗಸ್ಟ 15 ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೆಳಿಗ್ಗೆ 8ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ತ ರಕ್ತದಾನ ಶೀಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಕ್ತದಾನ ಶಿಬಿರದ ಸಂಯೋಜಕ ಕುಂತಿನಾಥ ಕಲಮನಿ ಅವರು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿತೊ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದೆ. ಕಳೆದ ವರ್ಷ ಒಂದೇ ದಿನದಲ್ಲಿ 936 ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದು ಈ ವರ್ಷವೂ ಸಹ ಹೊಸ ದಾಖಲೆ ಮಾಡುವ ದಿಸೆಯಲ್ಲಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ರಕ್ತದಾನ ಶಿಬಿರದಲ್ಲಿ ಕೆ.ಎಲ್.ಇ.ಬ್ಲಡ ಬ್ಯಾಂಕ,ಮಹಾವೀರ ಬ್ಲಡ್ ಬ್ಯಾಂಕ, ಬಿಮ್ಸ ಬ್ಲಡ ಬ್ಯಾಂಕ, ಮತ್ತು ಬೆಳಗಾಂ ಬ್ಲಡ ಬ್ಯಾಂಕಗಳು ಸಹ ಭಾಗವಹಿಸಲಿವೆ.ಈ ಶಿಬಿರದಲ್ಲಿ ರಕ್ತ ನೀಡುವ ದಾನಿಗಳಿಗೆ ಒಂದು ವರ್ಷದ ಅವಧಿಯ ಒಂದು ಲಕ್ಷ ರೂ. ವರೆಗಿನ ಅಪಘಾತ ವಿಮೆಯ ಪಾಲಿಸಿಯನ್ನು ನೀಡಲಾಗುವುದು. ಇದರ ಪ್ರಿಮಿಯಂವನ್ನು ಜಿತೋ ಸಂಸ್ಥೆಯು ಭರಿಸಲಿದೆ ಎಂದು ಅವರು ತಿಳಿಸಿದರು.
ಈ ರಕ್ತದಾನ ಶಿಬಿರಕ್ಕೆ ಬೆಳಗಾವಿಯ ವಿವಿಧ ಸಂಘ ಸಂಸ್ಥೆಗಳು, ರೋಟರಿ ಸಂಸ್ಥೆಗಳು, ಬಿಸಿಸಿಐ, ಸೇರಿದಂತೆ ಕೈಗಾರಿಕೆಗಳು, ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು ಸಹ ಸಹಕರಿಸಲು ಮುಂದೆ ಬಂದಿದ್ದು, ಒಟ್ಟಾರೆ ಈ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ರಕ್ತದಾನಿಗಳಿಗೆ ಅಂದು ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ರಕ್ತದಾನ ಶಿಬಿರದಲ್ಲಿ ಶೇಖರಿಸಿದ ರಕ್ತವನ್ನು ಎಲ್ಲ ಬ್ಲಡ ಬ್ಯಾಂಕಗಳಲ್ಲಿ ಇಡಲಾಗುತ್ತದೆ. ಯಾರಿಗಾದರೂ ರಕ್ತದ ಅವಶ್ಯಕತೆವಿದ್ದಲ್ಲಿ ಅವರು ಜಿತೋ ಸಂಸ್ಥೆಯನ್ನು ಸಂಪರ್ಕಿಸಿದ್ದಲ್ಲಿ ಅಂತವರಿಗೆ ತತ್‌ಕ್ಷಣ ರಕ್ತವನ್ನು ನೀಡುವ ವ್ಯವಸ್ಥೆಯನ್ನು ಜಿತೋ ಸಂಸ್ಥೆಯು ಹೊಂದಿದೆ. ಉದ್ಯಮಬಾಗದಲ್ಲಿರುವ ಜಿತೋ ಕಚೇರಿಯನ್ನು ಸಂಪರ್ಕಿಸಿ ರಕ್ತವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಇದೆ ಸಂದರ್ಭದಲ್ಲಿ ಕೆ.ಎಲ್.ಇ.ಬ್ಲಡ ಬ್ಯಾಂಕ ಸಂಚಾಲಕ ಡಾ.ವಿರಗಿ ಅವರು ಮಾತನಾಡಿ, ಜಿತೋ ಸಂಸ್ಥೆಯು ಕೈಗೊಂಡಿರುವ ರಕ್ತದಾನ ಶಿಬಿರ ಅತ್ಯಂತ ಸಮಯೋಚಿತ ಕಾರ್ಯಕ್ರಮವಾಗಿದ್ದು, ಇದರಿಂದ ನಮ್ಮ ಕೆ.ಎಲ್.ಇ.ಬ್ಲಡ ಬ್ಯಾಂಕಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರತಿ ದಿನ ಗ್ರಾಮೀಣ ಭಾಗದ ಜನರು ಬೆಳಗಾವಿಯ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಸಂಕಷ್ಟದ ಸಮಯಕ್ಕೆ ರಕ್ತದ ಬೇಡಿಕೆ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಅಗತ್ಯವಿದ್ದರಿಗೆ ರಕ್ತವನ್ನು ನೀಡಲು ಅನಕೂಲವಾಗಲೆಂದು ಜಿತೋ ಸಂಸ್ಥೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದ ಅವರು, ಶಿಬಿರದಲ್ಲಿ ನೀಡಲಾದ ರಕ್ತದ ಮಾದರಿಗಳನ್ನು ಎಲ್ಲ ರೀತಿಯಲ್ಲಿ ಟೆಸ್ಟಗಳನ್ನು ಮಾಡಿ ಅವುಗಳನ್ನು ಶೇಖರಿಸಲಾಗುತ್ತದೆ. ಅಗತ್ಯವಿದ್ದವರು ಜಿತೋ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿತೋ ಅಧ್ಯಕ್ಷ ವೀರಧವಲ ಉಪಾಧ್ಯೆ, ಕಾರ್ಯದರ್ಶಿ ಅಶೋಕ ಕಟಾರಿಯಾ, ರಕ್ತದಾನ ಶಿಬಿರದ ಮುಖ್ಯ ಸಂಯೋಜಕ ಹರ್ಷವರ್ಧನ ಇಂಚಲ, ಜಿತೋ ಸದಸ್ಯ ಅಭಯ ಆದಿಮನಿ ಸೇರಿದಂತೆ ಮೊದಲಾದವರು ಹಾಜರಿದ್ದರು.